ಸುಳ್ಯ ಪರಿವಾರಕಾನದಲ್ಲಿ ಪಿಕಪ್ ಪಲ್ಟಿ : ಅಪಾಯದಿಂದ ಪಾರು

0

ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಸುಳ್ಯದ ಪರಿವಾರಕಾನದ ಬಳಿ ಪಲ್ಟಿಯಾಗಿರುವ ಘಟನೆ ಮಾ.10 ರಂದು ರಾತ್ರಿ ನಡೆದಿದೆ.

ಘಟನೆಯಿಂದ ಪಿಕಪ್ ವಾಹನದ ಚಾಲಕ ಮತ್ತು ವಾಹನದಲ್ಲಿದ್ದ ಮತ್ತೋರ್ವರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಮಡಿಕೇರಿ ಕಡೆಯಿಂದ ಸುಳ್ಯದತ್ತ ಬರುತ್ತಿರುವ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.