ಕಲ್ಮಕಾರಿನಲ್ಲಿ ಸುರಂಗ ಮಾದರಿಯ ಅಡಗು ತಾಣ ಪತ್ತೆ

0

ವಿಚಿತ್ರ ಎನಿಸಿದರೂ ಸತ್ಯ, ಕೌತುಕದಿಂದ ಜನರ ಆಗಮನ

ಕಲ್ಮಕಾರಿನ ಉಮೇಶ್ ಬಿಳಿಮಲೆ ಎಂಬುವರಿಗೆ ಸೇರಿದ ಜಾಗ ಬಾಳೆಬೈಲು ಎಂಬಲ್ಲಿ ಗುಹೆ ಮಾದರಿಯ ಅಡಗುತಾಣ ಪತ್ತೆಯಾಗಿದೆ.

ಭೂಮಿಯ ಮೇಲ್ಭಾಗದಲ್ಲಿ ಸಣ್ಣ ವೃತ್ತಾಕಾರದ ಗುಳಿ ಇದ್ದು ಅದಕ್ಕೆ ಮುರ ಕಲ್ಲಿನ ಮುಚ್ಚಳ ದಿಂದ ಮುಚ್ಚಲಾಗಿದೆ. ಮುಚ್ಚಳ ತೆರೆದು ಒಳಗೆ ನೋಡಿದರೆ ಸುರಂಗ ಮಾದರಿಯಲಿದ್ದು ರಾಜರುಗಳ ಕಾಲದಲ್ಲಿ ರಕ್ಷಣೆ ಗೋಸ್ಕರ ಮಾಡಿದ ಅಡಗು ತಾಣದಂತಿದೆ. ಊರ ಕೆಲವರು ಇದರೊಳಗೆ ಇಳಿದು ಒಳ ಹೊಕ್ಕು ನೋಡಿದ್ದಾರೆ. ಒಂದಷ್ಟು ಭಾಗಕ್ಕೆ ನಡೆದುಕೊಂಡು ಹೋಗಲಾಗಿದ್ದು ಇನ್ನಷ್ಟು ಮುಂದೆ ಹೋಗಬಹುದಾಗಿದೆ. ಸುರಂಗ ಮಾದರಿಯಲ್ಲಿ ಬೇರೆ ಬೇರೆ ಕವಲುಗಳಿದ್ದು ರಕ್ಷಣೆಗೋಷ್ಕರ ಮಾಡಿರುವ ಸಾದ್ಯತೆ ಇರುವುದಾಗಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾಳೆಬೈಲು ಎಂಬಲ್ಲಿಗೆ ಹೊಸ ರಸ್ತೆ ನಿರ್ಮಾಣ ವೇಳೆ ಇದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.