ಉಬರಡ್ಕ: ವಾಟರ್ ಬೆಡ್ ಮತ್ತು ರೀಡಿಂಗ್ ಟೇಬಲ್ ಚಯರ್ ವಿತರಣೆ

0

ಉಬರಡ್ಕ ಮಿತ್ತೂರು ಗ್ರಾಮದ 2ನೇ ವಾರ್ಡ್ ನ ವಿಕಲ ಚೇತನರಿಗೆ 2023-24 ನೇ ಸಾಲಿನ ಫಲಾನುಭವಿಗಳಾದ ಬಾಲಕೃಷ್ಣ ಅಮೈಯವರಿಗೆ ವಾಟರ್ ಬೆಡ್ ಹಾಗೂ ಕೀರ್ತಿ ಕೋಡಿಯಡ್ಕ ರವರಿಗೆ ರೀಡಿಂಗ್ ಟೇಬಲ್ ಮತ್ತು ಚಯರನ್ನು ಮಾ.12 ರಂದು ಗ್ರಾಮ ಪಂಚಾಯತ್ ವತಿಯಿಂದ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಉಪಾಧ್ಯಕ್ಷೆ ಶ್ರೀಮತಿ ಚಿತ್ರಕುಮಾರಿ, ವಾರ್ಡ್ ನ ಸದಸ್ಯರಾದ ಅನಿಲ್ ಬಳ್ಳಡ್ಕ, ಶ್ರೀಮತಿ ಭವಾನಿ ಮೂರ್ಜೆ, ಪ್ರಶಾಂತ್ ಪಾನತ್ತಿಲ ಹಾಗೂ ಗ್ರಾ.ಪಂ ಸಿಬ್ಬಂದಿಗಳಾದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ರಂಜನ್ ಬಿ. ಅಖಿಲೇಶ್ ಉಪಸ್ಥಿತರಿದ್ದರು.