ನಾಳೆ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಕೊಳ್ಳಿಮುಹೂರ್ತ ಹಾಗೂ ಪೂರ್ವಭಾವಿ ಸಭೆ

0

ದ.ಕ. ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ಧ ಕಲ್ಲುಗುಂಡಿ ಒತ್ತೆಕೋಲ ಉತ್ಸವವು ಮಾ. 28ರಿಂದ 30ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಒತ್ತೆಕೋಲಕ್ಕೆ ಕೊಳ್ಳಿ ಮುಹೂರ್ತ ಮತ್ತು ದೈವದ ಸಮ್ಮಾನಗಳ ಪೂರ್ವಭಾವಿ ಸಭೆಯು ಮಾ.14ರಂದು ನಾಳೆ ಬೆಳಿಗ್ಗೆ 11.00ಕ್ಕೆ ಒತ್ತೆಕೋಲ ಗದ್ದೆಯಲ್ಲಿರುವ ಕಚೇರಿಯಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ಎಲ್ಲಾ ಸಂಘ ಸಂಸ್ಥೆಯ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಗೂ ಭಕ್ತಾದಿಗಳು ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿ ಸಮಿತಿಯವರು ತಿಳಿಸಿದ್ದಾರೆ.