ಸೋಣಂಗೇರಿ ಬೇಲ್ಯದಲ್ಲಿ ಭಕ್ತಿ- ವಿಜೃಂಭಣೆಯಿಂದ ನಡೆದ ದೈವಗಳ ನೇಮೋತ್ಸವ

0

ಸೋಣಂಗೇರಿ ಬೇಲ್ಯದ ನರಸಿಂಗ ಪರವರ ಮನೆಯಲ್ಲಿ ಮಾ.12 ಮತ್ತು 13 ರಂದು ಶ್ರೀ ಪಾಷಾಣಮೂರ್ತಿ, ಕೊರತ್ತಿ, ಮಯ್ಯೊಂತಿ, ಧರ್ಮದೈವ ಕುಪ್ಪೆ ಪಂಜುರ್ಲಿ ದೈವದ ನೇಮೋತ್ಸವ ಭಕ್ತಿ- ವಿಜೃಂಭಣೆಯಿಂದ ನಡೆಯಿತು.


ಮಾ‌.12 ರಂದು ಸಂಜೆ ಶ್ರೀ ದೈವಗಳ ಭಂಡಾರ ತೆಗೆದು, ರಾತ್ರಿ ಅನ್ನಸಂತರ್ಪಣೆ, ಬಳಿಕ ಶ್ರೀ ಪಾಷಾಣಮೂರ್ತಿ ದೈವದ ನೇಮೋತ್ಸವ ನಂತರ ಪ್ರಸಾದ ವಿತರಣೆ. ರಾತ್ರಿ ಶ್ರೀ ಕೊರತ್ತಿ ದೈವದ ನೇಮ, ಶ್ರೀ ಮಯ್ಯೋಂತಿ ದೈವದ ನೇಮ ನಡೆಯಿತು. ಮಾ. 13ರಂದು ಬೆಳಿಗ್ಗೆ ಧರ್ಮದೈವ (ಕುಪ್ಪೆ ಪಂಜುರ್ಲಿ) ನೇಮೋತ್ಸವ, ಪ್ರಸಾದ ವಿತರಣೆ. ಮಧ್ಯಾಹ್ನ
ಅನ್ನಸಂತರ್ಪಣೆ ನಡೆಯಿತು.


ನೇಮೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾಧಿಗಳನ್ನು ನರಸಿಂಗ ಪರವ ಮತ್ತು ಮಕ್ಕಳು ಬರಮಾಡಿಕೊಂಡರು. ನೂರಾರು ಮಂದಿ ಊರ- ಪರವೂರು ಭಕ್ತಾಧಿಗಳು, ಬಂಧುಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.