ನಕ್ಸಲರು ಪ್ರತ್ಯಕ್ಷರಾದ ಮಾಹಿತಿ‌ ಹಿನ್ನೆಲೆ

0

ನಕ್ಸಲ್ ನಿಗ್ರಹ ಪಡೆ ಆಗಮನ

ಮೂರು ಭಾಗಗಳಿಂದ ಕೂಂಬಿಂಗ್ ಸಂಭವ

ಕೂಜುಮಲೆ ಕಡಮಕಲ್ಲು ಪ್ರದೇಶದಲ್ಲಿ ನಕ್ಸಲರು ಪ್ರತ್ಯಕ್ಷರಾಗಿದ್ದಾರೆಂಬ ಮಾಹಿತಿಯ ಆಧಾರದಲ್ಲಿ ಇದೀಗ ಸ್ಥಳಕ್ಕೆ ನಕ್ಸಲ್ ನಿಗ್ರಹ ದಳ ಆಗಮಿಸಿದ್ದು, ಮೂರು ಕಡೆಗಳಲ್ಲಿ ಕೂಂಬಿಗ್ ಆರಂಭಿಸಿರುವುದಾಗಿ ತಿಳಿದು ಬಂದಿದೆ. ಕಾರ್ಕಳದಿಂದ ಬಂದ ನಕ್ಸಲ್ ನಿಗ್ರಹ ಪಡೆಯು ವಿವಿಧ ತಂಡಗಳಾಗಿ ಈ ಭಾಗದ ಬೇರೆ ಬೇರೆ ಪ್ರದೇಶಗಳಲ್ಲಿ ಕೂಂಬಿಂಗ್ ನಡೆಸಲು ಸಿದ್ಧವಾಗಿದೆ.


ಸುಳ್ಯ -ಮಡಿಕೇರಿ ಗಡಿ ಪ್ರದೇಶವಾಗಿರುವ ಮಡಿಕೇರಿ ತಾಲೂಕಿನ ಕಾಲೂರು ಗ್ರಾಮದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡ ತಂಡವೊಂದು ಕೂಜಿಮಲೆಯ ದಿನಸಿ ಅಂಗಡಿಯೊಂದರಿಂದ ಸುಮಾರು ೪ ಸಾವಿರ ರೂ.ಗಳಷ್ಟು ಬೆಲೆಯ ದಿನಸಿಯನ್ನು ಖರೀದಿಸಿದ್ದರೆನ್ನಲಾಗಿದೆ. ಇವರು ನಕ್ಸಲರೇ ಆಗಿರಬಹುದೆಂಬ ಗುಮಾನಿ ಹರಡಿದ್ದು ಸ್ಥಳೀಯರ ಆತಂಕಕ್ಕೂ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಸ್ಥಳಕ್ಕೆ ನಕ್ಸಲ್ ನಿಗ್ರಹ ದಳ ಮಾ. ೧೮ರಂದು ಬೆಳಿಗ್ಗೆ ಸ್ಥಳಕ್ಕೆ ಆಗಮಿಸಿದ್ದು, ಕೂಜಿಮಲೆ, ಕಡಮಕಲ್ಲು ಹಾಗೂ ಬಾಳುಗೋಡಿನ ಉಪ್ಪುಕಳ ಭಾಗಗಳಲ್ಲಿ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಆರಂಭಿಸಿರುವುದಾಗಿ ತಿಳಿದು ಬಂದಿದೆ.