ಮಾ.24 – ಮಾ.25: ವಳಲಂಬೆ ದೇವಸ್ಥಾನದಲ್ಲಿ ಶ್ರೀ ಸತ್ಯನಾರಾಯಣ ಪೂಜೆ, ನೇಮೋತ್ಸವ

0

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇಲ್ಲಿ ಮಾ.24 ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಮತ್ತು ಮಾ.25 ರಂದು ನೇಮೋತ್ಸವ ನಡೆಯಲಿದೆ.

ಮಾ.24 ರಂದು ಬೆಳಗ್ಗೆ ಗಣಪತಿ ಹೋಮ ಮತ್ತು ಶತರುದ್ರಾಭಿಷೇಕ ಹಾಗೂ 39ನೇ ವರ್ಷದ ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಲಿದೆ. ರಾತ್ರಿ ಶ್ರೀ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಲಿದೆ. ರಾತ್ರಿ ಶ್ರೀ ಮಹಿಷಮರ್ದಿನಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ನೀಲಾವರ ಇವರಿಂದ ಯಕ್ಷಗಾನ ಬಯಲಾಟ ‘ಕೋಟಿ-ಚೆನ್ನಯ’ ನಡೆಯಲಿದೆ.

ಮಾ. 25 ರಾಜ್ಯದೈವ ಮತ್ತು ಪುರುಷ ದೈವಗಳ ನೇಮೋತ್ಸವ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವಂತೆ ಆಡಳಿತ ವಿನಂತಿಸಿದೆ.