ಗೂನಡ್ಕ: ಚಾಲಕನಿಗೆ ನಿದ್ರೆ ಆವರಿಸಿದ ಹಿನ್ನೆಲೆ ರಸ್ತೆ ಬದಿಯ ಮೋರಿಗೆ ಕಾರು ಢಿಕ್ಕಿ, ಜಖಂ

0

ಚಾಲಕನಿಗೆ ನಿದ್ರೆ ಆವರಿಸಿದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮೋರಿಗೆ ಢಿಕ್ಕಿ ಹೊಡೆದು ಜಖಂಗೊಂಡ ಘಟನೆ ದ.ಕ. ಸಂಪಾಜೆ ಗ್ರಾಮದ ಗೂನಡ್ಕದಲ್ಲಿ ಮಾ.23ರಂದು ಅಪರಾಹ್ನ ಸಂಭವಿಸಿದೆ.

ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಗೂನಡ್ಕದ ಶಿರಾಡಿ ದೈವಸ್ಥಾನದ ದ್ವಾರದ ಬಳಿ ಮೋರಿಗೆ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿರುವುದಾಗಿ ತಿಳಿದುಬಂದಿದೆ.