ಕಳಂಜ: ನಮ್ಮ ಆರೋಗ್ಯ ಧಾಮದಲ್ಲಿ ಉಚಿತ ಔಷಧಿ ವಿತರಣೆ

0

ಅಯ್ಯನಕಟ್ಟೆ ಬಳಿಯ ಗೋಕುಲ ಕಾಂಪ್ಲೆಕ್ಸ್ ನಲ್ಲಿರುವ ಡಾ. ಕಿಶನ್ ರಾವ್ ಬಾಳಿಲರವರ ನಮ್ಮ ಆರೋಗ್ಯ ಧಾಮದಲ್ಲಿ ಮಹಿಳೆಯರಿಗೆ ಕ್ಯಾಲ್ಸಿಯಂ, ಕಬ್ಬಿಣಾಂಶ ಇರುವ ಔಷಧಿಗಳನ್ನು ಮಾ. 24ರಂದು ಉಚಿತವಾಗಿ ವಿತರಿಸಲಾಯಿತು.
ಸುಮಾರು 50 ಕ್ಕಿಂತಲೂ ಹೆಚ್ಚು ಮಹಿಳೆಯರು ಔಷಧ ಸ್ವೀಕರಿಸಿದರು. ಮಾ. 31ರಂದು ಮಕ್ಕಳಿಗೆ ವಿಟಮಿನ್ ಡಿ ಮತ್ತು ಜಂತುಹುಳದ ಔಷಧಿಯನ್ನು ಉಚಿತವಾಗಿ ವಿತರಿಸಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದೆಂದು ನಮ್ಮ ಆರೋಗ್ಯ ಧಾಮದ ವೈದ್ಯರಾದ ಡಾ.‌ ಕಿಶನ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.