ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ & ಮದರಸದಲ್ಲಿ ಹಿರಿಯ ವಿದ್ಯಾರ್ಥಿಗಳ ವತಿಯಿಂದ ಇಫ್ತಾರ್ ಕೂಟ

0

ಮುಸಲ್ಮಾನ ಬಾಂಧವರ ಪವಿತ್ರ ತಿಂಗಳಾಗಿರುವ ರಂಜಾನ್ ಮಾಸಾಚರಣೆಯ ಅಂಗವಾಗಿ ಜಯನಗರ ಜನ್ನತುಲ್ ಉಲೂಮ್ ಮಸ್ಜಿದ್ & ಮದರಸದಲ್ಲಿ ಜಯನಗರ ಹಳೆ ವಿದ್ಯಾರ್ಥಿಗಳ ವತಿಯಿಂದ ಮಾರ್ಚ್ 25 ರಂದು ಇಫ್ತಾರ್ ಕೂಟವನ್ನು ಆಯೋಜಿಸಲಾಯಿತು.

ಸ್ಥಳೀಯ ಮದರಸ ಸದರ್ ಮೊಅಲ್ಲಿಮ್ ಮಹಮ್ಮದ್ ಶಫೀಕ್ ಹಿಮಮಿ ದುವಾ ನೆರವೇರಿಸಿದರು. ಮಸ್ಜಿದ್ ಅಂಡ್ ಮದರಸಾ ಕಮಿಟಿಯ ಅಧ್ಯಕ್ಷ ನವಾಜ್ ಪಂಡಿತ್, ಕಾರ್ಯದರ್ಶಿ ಹಸೈನಾರ್ ಜಯನಗರ, ಉಪಾಧ್ಯಕ್ಷ ಜಾಹಿರ್ ಜಯನಗರ, ಮದರಸಾ ಉಸ್ತುವಾರಿ ಜಬ್ಬಾರ್ ಡಿ ಎಂ, ನಿರ್ದೇಶಕರುಗಳಾದ ಹಾಜಿ ಅಬ್ದುಲ್ಲಾ ಜಯನಗರ, ಉಬೈದ್, ರಿಯಾಜ್, ಶಿಯಾಬ್, ಅಬೂಬಕ್ಕರ್ ಡಿ ಎಂ, ಮುನೀರ್ ಆಟೋ,ಜೊತೆ ಕಾರ್ಯದರ್ಶಿ ಶಫೀಕ್, ಜಝೀಲ್, ಹಾಗೂ ಹಿರಿಯ ವಿದ್ಯಾರ್ಥಿಗಳಾದ ನೌಫಾಲ್, ಸಿರಾಜ್, ಸಿಯಾಬ್, ರಿಯಾಜ್, ಮಹಮ್ಮದ್ ತೌಫೀಕ್, ಬಿಸ್ರುಲ್ ಹ್ಹಾಫಿ, ಆಶಿಕ್ ಮೊದಲಾದವರು ಉಪಸ್ಥಿತರಿದ್ದರು.

ಸ್ಥಳೀಯ ನೂರಾರು ಮಂದಿ ಮುಸಲ್ಮಾನ ಬಾಂಧವರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.