ಪೆರಾಜೆ ಶ್ರೀ ಶಾಸ್ತಾವು ದೇವರ ಜಾತ್ರೋತ್ಸವ ಹಿನ್ನೆಲೆ

0

ಬೇಟೆ ಕರಿಮಗನ್ ಈಶ್ವರನ್ ದೈವದ ಕೋಲ

ದೇಗುಲದಲ್ಲಿ ಇಂದು ರಾತ್ರಿ ದೈವಗಳ ಬೆಳ್ಳಾಟ

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವವು ಮಾ.26ರಂದು ಪ್ರಾರಂಭಗೊಂಡಿದ್ದು, ಮಾ.28ರಂದು ಮಧ್ಯಾಹ್ನ ಬೇಟೆ ಕರಿಮಗನ್ ಈಶ್ವರನ್ ದೈವದ ಕೋಲ ನಡೆಯಿತು.

ಮಾ.27ರಂದು ಬೆಳಿಗ್ಗೆ ದೇವರ ದರ್ಶನಬಲಿ, ಬಟ್ಟಲುಕಾಣಿಕೆ, ಪ್ರಸಾದ ವಿತರಣೆ, ರಾತ್ರಿ ತುಳು ಕೋಲಗಳ ಬೆಳ್ಳಾಟಗಳು , ಬೇಟೆ ಕರಿಮಗನ್ ಈಶ್ವರನ್ ದೈವದ ಬೆಳ್ಳಾಟ, ತುಳುಕೋಲ ಹಾಗೂ ತಿರುವಪ್ಪಗಳು ಜರುಗಿತು.

ಮಾ.28ರಂದು ಮಧ್ಯಾಹ್ನ ಬೇಟೆ ಕರಿಮಗನ್ ಈಶ್ವರನ್ ದೈವದ ಕೋಲ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಮಾಜಿ ಮೊಕ್ತೇಸರ ನಾಗೇಶ್ ಕುಂದಲ್ಪಾಡಿ, ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ದೇವತಕ್ಕ ರಾಜಗೋಪಾಲ ರಾಮಕಜೆ, ತಕ್ಕಮುಖ್ಯಸ್ಥರುಗಳು, ಪದಾಧಿಕಾರಿಗಳು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ರಾತ್ರಿ ಬೇಟೆ ಕರಿಮಗನ್ ಈಶ್ವರನ್ ದೈವದ ಬೆಳ್ಳಾಟ, ಎರಡು ತುಳು ಕೋಲಗಳ ಬೆಳ್ಳಾಟಗಳು, ಮತ್ತು ಅವುಗಳ ತಿರುವಪ್ಪಗಳು ಜರುಗಲಿದೆ.