ಸುಬ್ರಹ್ಮಣ್ಯ : ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ವೈದ್ಯರ ಗ್ರಾಮೀಣ ವೈದ್ಯಕೀಯ ಸೇವೆ ಶ್ರೇಷ್ಠವಾದದ್ದು: ಡಾ| ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ

ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆಯಲ್ಲಿ ಜಸ್ಟಿಸ್ ಕೆ.ಎಸ್. ಹೆಗಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ, ಸದಾನಂದ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಕೇಂದ್ರ ಸುಬ್ರಹ್ಮಣ್ಯ ಮತ್ತು ರೋಟರಿ ಕ್ಲಬ್, ಲಯನ್ಸ್ ಕ್ಲಬ್ ,ಇನ್ನರ್ ವೇರ್ ಕ್ಲಬ್, ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ,ಇವರ ಸಂಯುಕ್ತ ಆಶ್ರಯದಲ್ಲಿ ಮಾ.೨೪ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಸುಬ್ರಹ್ಮಣ್ಯ ಮಠದ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಸಮಾಜ ಸೇವೆಯೇ ಜನರ ಸೇವೆ ಎಂಬ ಉದಾತ್ತ ಮನೋಭಾವದಿಂದ ನಿಟ್ಟೆ ಜಸ್ಟಿಸ್ ಕೆ.ಎಸ್. ಸದಾನಂದ ಹೆಗಡೆಯವರು ಬಹಳ ಹಿಂದೆ ಇಲ್ಲಿ ಗ್ರಾಮೀಣ ಬಡ ಜನರಿಗೆ ದೂರಕ್ಕೆ ಹೋಗೋ ಬದಲು ಹತ್ತಿರದಲ್ಲಿ ಎಲ್ಲಾ ವೈದ್ಯಕೀಯ ಸೇವೆಗಳು ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಸದಾನಂದ ಆಸ್ಪತ್ರೆಯನ್ನು ಆರಂಭಿಸಿರುತ್ತಾರೆ.

ಅಂದಿನ ಕಾಲದಲ್ಲಿ ವೈದ್ಯಕೀಯ ಖರ್ಚುವೆಚ್ಚಗಳು ರೋಗಿಗಳಿಗೆ ದುಬಾರಿಯಾಗುವುದನ್ನು ಮನಗಂಡ ಹೆಗಡೆಯವರು ಬಡ ರೋಗಿಗಳಿಗೆ ಕಡಿಮೆ ದರದಲ್ಲಿ ಹಾಗೂ ಕೆಲ ಸಂದರ್ಭದಲ್ಲಿ ಉಚಿತವಾಗಿ ಸೇವೆಯನ್ನು ನೀಡುವುದರ ಮೂಲಕ ಸೇವಾ ತೃಪ್ತಿಯನ್ನ ಕಂಡುಕೊಂಡಿರುತ್ತಾರೆ. ಇಲ್ಲಿ ಪೂರ್ಣಕಾಲಿಕ ವೈದ್ಯರು, ದಂತ ವೈದ್ಯರು, ಹಾಗೂ ತರಬೇತಿ ವೈದ್ಯರುಗಳು ದಿನದ ಎಲ್ಲಾ ಸಂದರ್ಭಗಳಲ್ಲಿ ಸೇವೆಯನ್ನು ಒದಗಿಸುತ್ತಾ ಬಂದಿರುತ್ತಾರೆ.


ಇಲ್ಲಿಯ ಸೇವೆಯನ್ನು ಫಲಾನು ಭವಿಗಳು ಉಪಯೋಗಿಸಿಕೊಳ್ಳಬೇಕೆಂದು ನುಡಿದರು. ಮುಖ್ಯ ಅತಿಥಿಗಳಾಗಿದ್ದ ನಿಟ್ಟೆ ಕೆ.ಎಸ್. ಹೆಗಡೆ ಚಾರಿಟೇಬಲ್ ಆಸ್ಪತ್ರೆ ಮುಖ್ಯಸ್ಥರಾದ ಸತೀಶ್ ಭಂಡಾರಿ ಅವರು ಮಾತನಾಡಿ ನಮ್ಮಲ್ಲಿ 23 ಗ್ರಾಮೀಣ ಆಸ್ಪತ್ರೆಗಳು ಇದ್ದು ಅದರಲ್ಲಿ ಸುಬ್ರಹ್ಮಣ್ಯ ಸದಾನಂದ ಆಸ್ಪತ್ರೆಗೆ ನಾವು ಹೆಚ್ಚಿನ ಮಹತ್ವವನ್ನ ನೀಡುತ್ತಿದ್ದೇವೆ ಅಲ್ಲದೆ ಇಲ್ಲಿಗೆ ಬೇಕಾದ ಸೌಲಭ್ಯಗಳನ್ನು ಕೂಡ ಹಂತ ಹಂತವಾಗಿ ನೀಡಿದ್ದೇವೆ.

ಶ್ರೀ ಸುಬ್ರಹ್ಮಣ್ಯ ಮಠ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಇನ್ನಷ್ಟು ಈ ಆಸ್ಪತ್ರೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು. ವೇದಿಕೆಯಲ್ಲಿ ಸದಾನಂದ ಆಸ್ಪತ್ರೆ ಆಡಳಿತ ಅಧಿಕಾರಿ ಮೇಜರ್ ರಾಘವೇಂದ್ರ, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಳಂಗಾಯ ,ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು, ಇನ್ನರ್ ಕ್ಲಬ್ ಪ್ರಭಾರ ಅಧ್ಯಕ್ಷೆ ಶ್ರುತಿ, ಡಾ|ರವಿ ಕಕ್ಕೆ ಪದವು ,ನಿವೃತ್ತ ಪ್ರಾಂಶುಪಾಲ ಎಸ್.ಎನ್ ಭಟ್, ಸುಬ್ರಹ್ಮಣ್ಯದ ಉದ್ಯಮಿ ಹರೀಶ್ ಕಾಮತ್, ಸದಾನಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಭಾನುಮತಿ ಉಪಸ್ಥಿತರಿದ್ದರು. ವಿಮಲಾ ರಂಗಯ್ಯ ಸ್ವಾಗತದೊಂದಿಗೆ ನಿರೂಪಿಸಿದರು. ರಾಮಚಂದ್ರ ಪಳಂಗಾಯ ಧನ್ಯವಾದ ಸಮರ್ಪಿಸಿದರು.


ಶಿಬಿರದಲ್ಲಿ ಕಣ್ಣಿನ ಪರೀಕ್ಷೆ , ಚರ್ಮ ರೋಗದ ಪರೀಕ್ಷೆಗಳು, ಕಣ್ಣು ಕಿವಿ ಮೂಗಿನ ಪರೀಕ್ಷೆಗಳು, ದಂತ ಪರೀಕ್ಷೆಗಳು, ಹಾಗೂ ಇನ್ನಿತರ ಪರೀಕ್ಷೆಗಳನ್ನು
ನಿಟ್ಟೆ ಆಸ್ಪತ್ರೆಯ ವೈದ್ಯರ ತಂಡಗಳು ನಡೆಸಿಕೊಟ್ಟರು.