ಗ್ಯಾರಂಟಿ ಯೋಜನೆ ಕಾಂಗ್ರೆಸ್ ಶಕ್ತಿ : ಪಿ.ಸಿ.

0

ಕಾಂಗ್ರೆಸ್ ನಾಯಕರು ಒಟ್ಟಾದರೆ ಗೆಲುವು ಶತ ಸಿದ್ಧ : ಅಡ್ಪಂಗಾಯ

ಕೆಲಸ ಮಾಡದ ನಾಯಕರಿಗೆ ಗೇಟ್ ಪಾಸ್ ನೀಡಿ : ಜೆ.ಪಿ.ರೈ

ಲೋಕಸಭಾ ಚುನಾವಣೆಗೆ ಜಿಲ್ಲೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪದ್ಮರಾಜ್ ರಾಮಯ್ಯ ಸಮರ್ಥ ಅಭ್ಯರ್ಥಿ ನಮ್ಮಲ್ಲಿದ್ದಾರೆ. ಅವರ ಗೆಲುವಿಗೆ ನಾವೆಲ್ಲರೂ ಶ್ರಮ ಪಟ್ಟು ದುಡಿದು ಈ ಬಾರಿ ಕಾಂಗ್ರೆಸ್ ಪಕ್ಷ ಗೆಲ್ಲುವಂತೆ ಮಾಡೋಣ. ರಾಜ್ಯದ ಸಿದ್ಧರಾಮಯ್ಯರ ಸರಕಾರ ನೀಡಿರುವ ಜನರ ಪರ ಯೋಜನೆಯಾಗಿರುವ ಗ್ಯಾರಂಟಿ ಯೋಜನೆ ಕಾಂಗ್ರೆಸ್ ಪಕ್ಷದ ಶಕ್ತಿ. ಈ ಚುನಾವಣೆಯಲ್ಲಿ ಇದನ್ನು ಪ್ರತೀ ಮನೆಗೂ ಕೋಗಿ ಜನರಿಗೆ ಮನದಟ್ಟು ಮಾಡಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಸುಳ್ಯದಿಂದಲೇ ಮುನ್ನುಡಿ ಬರೆಯುತ್ತೇವೆ'' ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ್ ಹೇಳಿದರು.

ಸುಳ್ಯದಲ್ಲಿ ಕಾಂಗ್ರೆಸ್ ಚುನಾವಣಾ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಸುಳ್ಯದ ಧನಂಜಯ ಅಡ್ಪಂಗಾಯರು ಮಾತನಾಡಿ '`ಕಾಂಗ್ರೆಸ್ ನಾಯಕರು ಒಟ್ಟಾಗಿ ಕೆಲಸ ಮಾಡಿದರೆ ಸುಳ್ಯದಲ್ಲಿ ಗೆಲುವು ಖಂಡಿತಾ ಸಿಗುತ್ತದೆ '' ಎಂದು ಹೇಳಿದರು. ಈ ಭಾಗದಲ್ಲಿ ಅಡಿಕೆ ಹಳದಿ ಲೆ ರೋಗ ಸಮಸ್ಯೆ ಇದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವಲ್ಲಿ ಇಲ್ಲಿ ಸಂಸದರಾಗಿದ್ದ ನಳಿನ್ ಕಟೀಲ್ ಶ್ರಮಿಸಿಲ್ಲ. ಅವರು ಕರಷಿಕರ ಪರ ನಿಂತಿಲ್ಲ. ಇಲ್ಲಿಯವರೇ ಪವರ್ ಮಿನಿಸ್ಟರ್ ಇದ್ದರೂ ೧೧೦ ಕೆ.ವಿ. ತರಲು ಬಿಜೆಪಿಯಿಂದ ಆಗಿಲ್ಲ. ಇದೆಲ್ಲವನ್ನು ಜನರಿಗೆ ತಿಳಿಸುವ ಜತೆಗೆ, ಕಾಂಗ್ರೆಸ್ ಸರಕಾರದ ಸಾಧನೆಯನ್ನು ತಿಳಿಸುವ ಕೆಲಸ ಆಗಬೇಕು” ಎಂದು ಹೇಳಿದರು.


ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಎನ್.ಜಯಪ್ರಕಾಶ್ ರೈ ಮಾತನಾಡಿ, “ಒಬ್ಬ ನಾಯಕರಿಗೆ ಎರಡು ಮೂರು ಬೂತ್ ಕೊಟ್ಟು ಅವರು ಅಲ್ಲೇ ಇದ್ದು ಕೆಲಸ ಮಾಡಬೇಕು. ಆ ರಿತಿಯ ಯೋಜನೆ ರೂಪಿಸಿಕೊಂಡಿzವೆ. ನಮ್ಮಲ್ಲಿ ಭಿನ್ನಾಭಿಪ್ರಾಯ ಇಲ್ಲ. ಅಭಿಪ್ರಾಯ ಬೇಧ ಇದೆ. ಅದು ಸರಿಯಾಗಬೇಕು. ಗ್ಯಾರಂಟಿ ಯೋಜನೆಯ ಮೂಲಕ ಪ್ರತೀ ಬೂತ್‌ನಲ್ಲಿ ೫೦ ಓಟು ಬರುವಂತೆ ಕೆಲಸ ಮಾಡುತ್ತೇವೆ ಎಂದ ಅವರು, ರಮಾನಾಥ ರೈಯವರಲ್ಲಿ ಹೋಗಿ ಬೆನಿಫಿಟ್ ಪಡೆದು ಬರುವ ಕೆಲವು ನಾಯಕರು ಇಲ್ಲಿ ಬಂದು ಪಕ್ಷದ ಕೆಲಸ ಮಾಡುವುದಿಲ್ಲ. ಅವರಿಗೆ ಕೆಲಸ ಮಾಡುವಂತೆ ಸೂಚನೆ ನೀಡಬೇಕು. ಕೆಲಸ ಮಾಡದಿದ್ದರೆ ಅಂತವರಿಗೆ ಗೇಟ್ ಪಾಸ್ ಕೊಡಿ” ಎಂದು ಅವರು ಹೇಳಿದರು.