ನಿಡ್ಡಾಜೆ ತರವಾಡು ಮನೆಯಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ

0

ಮುರುಳ್ಳ ಗ್ರಾಮದ ನಿಡ್ಡಾಜೆ ತರವಾಡು ಮನೆಯಲ್ಲಿ ಧರ್ಮದೈವ ಮತ್ತು ಪರಿವಾರ ದೈವಗಳ ನೇಮೋತ್ಸವ ವು ಮಾ.25 ರಿಂದ ಮಾ.26 ರ ತನಕ‌ ನಡೆಯಿತು.


ಮಾ.25.ರಂದು ಸತ್ಯದೇವತೆ, ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ ಕಲ್ಲುರ್ಟಿ, ಚಾಮುಂಡಿ ಹಾಗೂ ಪರಿವಾರ ದೈವಗಳ ನೇಮೋತ್ಸವವು ನಡೆದು ಮಾ.26 ರಂದು ಶ್ರೀ ಧರ್ಮದೈವ ರುದ್ರಚಾಮುಂಡಿ ದೈವದ ನೇಮೋತ್ಸವ ನಡೆದು ನಂತರ ದೈವಗಳ ಗಂಧ ಪ್ರಸಾದ ವಿತರಣೆ ನಡೆದು ನಂತರ ಗುಳಿಗ ದೈವದ ನೇಮೋತ್ಸವ ನಡೆದು ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭದಲ್ಲಿ ನಿಡ್ಡಾಜೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತಿರಿದ್ದರು.