ಪೆರಾಜೆ: ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಸಂಭ್ರಮ

0

ಕರಿಂತಿರಿ ನಾಯರ್ – ಪುಲಿಮಾರುತನ್ ಹಾಗೂ ಬೇಟೆ ಕರಿಮಗನ್ ಈಶ್ವರನ್ ದೈವದ ಕೋಲ

ಪೆರಾಜೆ ಶ್ರೀ ಶಾಸ್ತಾವು ದೇವರ ಸನ್ನಿಧಿಯಲ್ಲಿ ಕಾಲಾವಧಿ ಜಾತ್ರೋತ್ಸವವು ಸಂಭ್ರಮದಿಂದ ಜರುಗುತ್ತಿದ್ದು, ಪ್ರತೀ ದಿನ ಹಲವು ದೈವಗಳ ಕೋಲ ಜರುಗುತ್ತಿದೆ.

ಮಾ.29ರಂದು ಮಧ್ಯಾಹ್ನ ಬೇಟೆ ಕರಿಮಗನ್ ಈಶ್ವರನ್ ದೈವದ ಕೋಲ, ರಾತ್ರಿ ಪಳ್ಳಿಯಾರ ಬಾಗಿಲು ತೆರೆದು, ಕರಿಂತಿರಿ ನಾಯರ್ ಪುಲಿಮಾರುತನ್ ದೈವಗಳ ಬೆಳ್ಳಾಟಗಳು ಜರುಗಿತು. ಬಳಿಕ ಬೇಟೆ ಕರಿಮಗನ್ ಈಶ್ವರನ್ ದೈವದ ಬೆಳ್ಳಾಟ, ತುಳುಕೋಲದ ಬೆಳ್ಳಾಟಗಳು ಮತ್ತು ಅವುಗಳ ತಿರುವಪ್ಪಗಳು ಜರುಗಿತು.

ಮಾ.30ರಂದು ಬೆಳಿಗ್ಗೆ ಕರಿಂತಿರಿ ನಾಯರ್ ದೈವ, ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವದ ಕೋಲ ಮಧ್ಯಾಹ್ನ ಅನ್ನಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಮೊಕ್ತೇಸರ ಜಿತೇಂದ್ರ ನಿಡ್ಯಮಲೆ, ಆಡಳಿತ ಕಾರ್ಯದರ್ಶಿ ತೇಜಪ್ರಸಾದ್ ಅಮಚೂರು, ಸಹ ಕಾರ್ಯದರ್ಶಿ ಚಿನ್ನಪ್ಪ ಅಡ್ಕ, ದೇವತಕ್ಕ ರಾಜಗೋಪಾಲ ರಾಮಕಜೆ, ತಕ್ಕಮುಖ್ಯಸ್ಥರಾದ ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಪುರುಷೋತ್ತಮ ನಿಡ್ಯಮಲೆ, ಗಣಪತಿ ಕುಂಬಳಚೇರಿ, ಮಾಜಿ ಮೊಕ್ತೇಸರರು, ಪದಾಧಿಕಾರಿಗಳು, ಅರ್ಚಕವೃಂದದವರು, ಸಿಬ್ಬಂದಿವರ್ಗದವರು ಹಾಗೂ ಊರ – ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಇಂದು ರಾತ್ರಿ ದೇವಸ್ಥಾನದಲ್ಲಿ ‌ಪುಲಿಯನ್ ಮತ್ತು ಪುಲಿಕಂಡನ್ ದೈವಗಳ ಬೆಳ್ಳಾಟ, ತುಳು ಕೋಲಗಳ ಬೆಳ್ಳಾಟ, ಬೇಟೆ ಕರಿಮಗನ್ ಈಶ್ವರನ್ ದೈವದ ಬೆಳ್ಳಾಟ ಹಾಗೂ ತುಳು ಕೋಲಗಳ ತಿರುವಪ್ಪಗಳು ಜರುಗಲಿದೆ.