ಎ.1ರಿಂದ ಎ.29 : ಕಾವೂರು ಶ್ರೀ ಮಹಾವಿಷ್ಣು ದೇವರಿಗೆ ಜಾತ್ರೋತ್ಸವದ ಸಂಭ್ರಮ

0

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳಿಗೊಳಪಟ್ಟ ಪಂಚಸ್ಥಾಪನೆಗಳಲ್ಲಿ ಒಂದಾದ ಕಾವೂರು ಶ್ರೀ ಮಹಾವಿಷ್ಣು ದೇವರ ಜಾತ್ರೋತ್ಸವವು ಎ.1ರಿಂದ ಎ.29ರವರೆಗೆ ವಿವಿಧ ‌ಧಾರ್ಮಿಕ ಹಾಗೂ ದೈವಗಳಿಗೆ ನೇಮೋತ್ಸವದೊಂದಿಗೆ ನಡೆಯಲಿದೆ.

ಎ.1ರಂದು ಬೆಳಿಗ್ಗೆ ಮುಹೂರ್ತದ ಗೊನೆ ಕಡಿಯುವುದು, ಎ.6ರಂದು ಬೆಳಿಗ್ಗೆ ಶಿರಾಡಿ ಯಾನೆ‌ ರಾಜಂ ದೈವದ ಭಂಡಾರ ಬರುವುದು, ಬಳಿಕ ಉಗ್ರಾಣ ತುಂಬಿಸಿ ನಂತರ ಧ್ವಜಾರೋಹಣ ನಡೆಯಲಿದೆ.

ಎ.8ರಂದು ಪೂರ್ವಾಹ್ನ ತೋಟಚಾವಡಿಯಲ್ಲಿ ದೇವರಿಗೆ ಬಲ್ಲಾಳರ ಕಾಣಿಕೆ, ಉಳ್ಳಾಕುಳ ದರ್ಶನ, ರಾತ್ರಿ ಉತ್ಸವ ಬಲಿ ಪ್ರಾರಂಭ, ರಂಗಪೂಜೆ ಹಾಗೂ ನಂತರ ಅನ್ನಸಂತರ್ಪಣೆ ನಡೆಯಲಿದೆ.

ಎ.9ರಂದು ಪೂರ್ವಾಹ್ನ ಸಣ್ಣ ದರ್ಶನ ಬಲಿ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಉಡ್ಕೆ ಬಲಿ ನಡೆಯಿತು.

ಎ.10ರಂದು ಪೂರ್ವಾಹ್ನ ದರ್ಶನ ಬಲಿ, ಇತರ ಕಾರ್ಯಕ್ರಮಗಳ ಮುಕ್ತಾಯದ ನಂತರ ಮಧ್ಯಾಹ್ನ ಪಯ್ಯೋಳಿ ಹೊರಡುವುದು, ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ರಂಗಪೂಜೆ, ಕಟ್ಟೆಪೂಜೆ ನಡೆಯಲಿದೆ.

ಎ.11ರಂದು ರಾತ್ರಿ ಅನ್ನಸಂತರ್ಪಣೆ, ತೋಟಚಾವಡಿಯಿಂದ ಉಳ್ಳಾಕುಳ ಮತ್ತು ಮಿತ್ತೂರು ನಾಯರ್ ಭಂಡಾರ ಬರುವುದು, ವಾಲಸಿರಿ ಉತ್ಸವ, ಕಟ್ಟೆಪೂಜೆ ಬಳಿಕ ದೇವಳಕ್ಕೆ ಬಂದು ದೇವರಿಗೆ ಶಯನ ನಡೆಯಲಿದೆ.