ಸುಳ್ಯ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ “ಚಿಣ್ಣರ ಕಲರವ” ಶಿಬಿರದ ಉದ್ಘಾಟನೆ

0

ಪುಟಾಣಿ ಮಕ್ಕಳೊಂದಿಗೆ ಶಿಬಿರದಲ್ಲಿ ವರ್ಷದ ರಜಾ- ಮಜಾ

ಸುಳ್ಯದ ಅಂಬಟೆಡ್ಕ ದಲ್ಲಿರುವ ವರ್ತಕರ ಸಂಘದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ 3 ನೇ ವರ್ಷದ ಶಿಬಿರ “ಚಿಣ್ಣರ ಕಲರವ 2024” ಇದರ ಉದ್ಘಾಟನಾ ಸಮಾರಂಭವು ಎ.1 ರಂದು ನಡೆಯಿತು.

ಎ.1 ರಿಂದ 8 ರ ತನಕ ನಡೆಯಲಿರುವ ಶಿಬಿರವನ್ನು ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿಯವರು ದೀಪ ಪ್ರಜ್ವಲಿಸಿಉದ್ಘಾಟಿಸಿದರು

ಅಂಜಲಿ ಸ್ಕೂಲ್ ನ ಸಂಚಾಲಕಿ ಶ್ರೀಮತಿ ಗೀತಾಂಜಲಿ ಯವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿ ಕಲಾವಿದೆ ಕು. ರಮ್ಯಾ ನಡುಮನೆ, ಪೋಷಕ ಕಮಿಟಿ ಸದಸ್ಯರಾದ ಶ್ರೀಮತಿ ಸೌಮ್ಯ, ಶ್ರೀಮತಿ ಚಂದ್ರಾವತಿ,
ಶ್ರೀಮತಿ ಶ್ರುತಿ, ಚೇತನ್ ಉಪಸ್ಥಿತರಿದ್ದರು.


ಬೇಬಿ| ದ್ಯುತಿ ಬೆಂಗಳೂರು ಪ್ರಾರ್ಥಿಸಿದರು.
ಶ್ರೀಮತಿ ಗೀತಾಂಜಲಿ ಯವರುಸ್ವಾಗತಿಸಿ,
ವಂದಿಸಿದರು.
ಶಿಬಿರದ ಆರಂಭದಲ್ಲಿ ಮಕ್ಕಳಿಗೆ ಭಜನೆಯ ಹಾಡಿನ ತರಬೇತಿ ಯೊಂದಿಗೆ ಗಾಯಕ ಶಿವಪ್ರಸಾದ್ ಆಲೆಟ್ಟಿ ಯವರು ಚಾಲನೆ ನೀಡಿದರು. ಶಿಬಿರದಲ್ಲಿ ಪುಟಾಣಿ ಮಕ್ಕಳಿಂದ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ.
ಜಿಲ್ಲೆಯ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ರೀತಿಯ ಆಟೋಟಗಳು ಹಾಗೂ ಕಲಿಕಾ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಹಮ್ಮಿಕೊಂಡು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಸಂಚಾಲಕರು ತಿಳಿಸಿದರು. ಶಾಲೆಯ ಸಿಬ್ಬಂದಿ ವರ್ಗದವರು ಸಹಕರಿಸಿದರು.