ಅಡಿಕೆ ಎಲೆ ಹಳದಿ ರೋಗ ತೋಟದ ಫಲಾನುಭವಿ ರೈತ ನಾನುಶಾಶ್ವತ ಪರಿಹಾರಕ್ಕೆ ನಮ್ಮದೂ ಆಗ್ರಹ ಇದೆ : ಕಂಜಿಪಿಲಿ

0

ಕೊಡಿಯಾಲಬೈಲು-ದುಗಲಡ್ಕ ರಸ್ತೆ ಕಾಮಗಾರಿ ಪ್ರಗತಿ:ಎಲಿಮಲೆ- ಅರಂತೋಡು ರಸ್ತೆ ಅಭಿವೃದ್ಧಿ ಮಾಡುತ್ತೇವೆ

”ಅಡಿಕೆ ಎಲೆ ಹಳದಿ ರೋಗ ನಮ್ಮ ತೋಟದಲ್ಲಿಯೂ ಇದೆ. ನಾನೂ ಕೂಡಾ ಅದರ ಫಲಾನುಭವಿ ರೈತ. ಅದಕ್ಕೆ ಶಾಶ್ವತ ಪರಿಹಾರ ಆಗಬೇಕೆನ್ನುವುದು ನಮ್ಮದೂ ಆಗ್ರಹ ಇದೆ. ಈಗಿನ ನಮ್ಮ ಅಭ್ಯರ್ಥಿ ಈಗಾಗಲೇ ಹೇಳಿದ್ದಾರೆ. ನಾವೂ ಕೂಡಾ ಅವರು ಗೆದ್ದ ಬಳಿಕ ಅಭಿವೃದ್ಧಿಯ ಜತೆಗೆ ಮೂಲಭೂತ ಸಮಸ್ಯೆಯಾಗಿ ಕಾಡುತ್ತಿರುವ ಅಡಿಕೆ ಎಲೆ ಹಳದಿ ರೋಗ ಹಾಗೂ ಎಲೆ ಚುಕ್ಕೆ ರೋಗಕ್ಕೆ ಶಾಶ್ವತ ಪರಿಹಾರ ಕಂಡು ಹುಡುಕಲು ಒತ್ತಡ ಹಾಕುತ್ತೇವೆ” ಎಂದು ಲೋಕಸಭಾ ಚುನಾವಣೆ ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿರುವ ಹರೀಶ್ ಕಂಜಿಪಿಲಿ ಹೇಳಿದರು.


ಎ.೨ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಅವರು ಉತ್ತರಿಸಿದರು. “ಈಗಾಗಲೇ ಕ್ಷೇತ್ರದ ಹಲವು ರಸ್ತೆಗಳು ಅಭಿವೃದ್ಧಿ ಆಗಿದೆ. ಸಿ.ಆರ್.ಎಫ್. ಫಂಡ್‌ನಲ್ಲಿ ಕೂಡಾ ಪ್ರಮುಖ ರಸ್ತೆಗಳು ಅಭಿವೃದ್ಧಿ ಕಂಡಿದೆ. ಬೆರಳೆಣಿಕೆಯ ರಸ್ತೆ ಬಾಕಿ ಇದೆ. ಎಲಿಮಲೆ -ಅರಂತೋಡು ರಸ್ತೆಯಲ್ಲಿ ೪ ಕಿ.ಮೀ. ನಷ್ಟು ಶಾಸಕರು ಅನುದಾನ ಇರಿಸಿ ಅಭಿವೃದ್ಧಿ ಮಾಡಿದ್ದಾರೆ. ಉಳಿದ ಭಾಗವನ್ನು ಮುಂದಿನ ದಿನದಲ್ಲಿ ಮಾಡುತ್ತೇವೆ. ಸುಳ್ಯ – ಕೊಡಿಯಾಲಬೈಲು – ದುಗಲಡ್ಕ ರಸ್ತೆಯಲ್ಲಿ ರೂ. ೧ ಕೋಟಿ ೪೦ ಲಕ್ಷದ ಕೆಲಸ ಆಗಿದೆ. ೫೦ ಲಕ್ಷದ ಕಾಮಗಾರಿ ಪ್ರಗತಿಯಲ್ಲಿದೆ. ಮತ್ತು ಉಳಿಕೆಯಾಗುವ ಭಾಗವನ್ನು ಮುಂದಿನ ದಿನದಲ್ಲಿ ಮಾಡಿ ಮುಗಿಸುತ್ತೇವೆ. ಎಲ್ಲವೂ ಒಮ್ಮೆಗೆ ಮಾಡುವುದಾದರೆ ಮುಂದೆ ಜನಪ್ರತಿನಿಧಿಗಳ ಅವಶ್ಯಕತೆ ಇದೆಯಾ? ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ಬಿಜೆಪಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಶಾಸಕಿ ಭಾಗಿರಥಿ ಮುರುಳ್ಯ, ದ.ಕ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ಸುಳ್ಯ ಪ್ರಭಾರಿ ರವೀಂದ್ರ ಶೆಟ್ಟಿ ಉಳಿದೊಟ್ಟು, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಮಹೇಶ್ ಜೋಗಿ, ಬಿಜೆಪಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಬಿಜೆಪಿ ನಗರ ಮಹಾಶಕ್ತಿಕೇಂದ್ರದ ಎ.ಟಿ.ಕುಸುಮಾಧರ, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ನಿರ್ದೇಶಕ ಹೇಮಂತ್ ಕಂದಡ್ಕ, ನ.ಪಂ. ಸದಸ್ಯೆ ಶಶಿಕಲಾ ನೀರಬಿದಿರೆ, ಸಾಮಾಜಿಕ ಜಾಲತಾಣದ ಜಿಲ್ಲಾ ಸಮಿತಿ ಸದಸ್ಯ ಪ್ರಸಾದ್ ಕಾಟೂರು ಇದ್ದರು.