ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ವಿವಿಧ ಕೊಡುಗೆಗಳ ಲೋಕಾರ್ಪಣೆ

0

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ಐವರ್ನಾಡಿನಲ್ಲಿ ವಿವಿಧ ಕೊಡುಗೆಗಳ ಲೋಕಾರ್ಪಣೆ ಕಾರ್ಯಕ್ರಮವು ಎ.02 ರಂದು ನಡೆಯಿತು.
ರೋಟರಿ ಜಿಲ್ಲಾ ಗವರ್ನರ್ ರೊ.ಎಚ್.ಆರ್.ಕೇಶವ ರವರು ಹಾಗೂ ಅಸಿಸ್ಟೆಂಟ್ ಗವರ್ನರ್ ರೊ.ಪುರಂದರ ರೈಯವರು ವಿವಿಧ ಕೊಡುಗೆಗಳ ಉದ್ಘಾಟನೆ ಮಾಡಿದರು.
ಬಾಂಜಿಕೋಡಿ ಅಂಗನವಾಡಿಯಲ್ಲಿ ಮಕ್ಕಳಿಗೆ ಜಾರುಬಂಡಿ, ಐವರ್ನಾಡು ಸ.ಕಾಲೇಜು ಮೈದಾನದ ಎದುರು ಇಂಟರ್ ಲಾಕ್ ಹಾಗೂ ಕುಳಿತುಕೊಳ್ಳಲು ಅಳವಡಿಸಿದ ಬೆಂಚುಗಳ ಉದ್ಘಾಟನೆ, ಐವರ್ನಾಡು ಮುಖ್ಯ ರಸ್ತೆ ಬದಿಯಲ್ಲಿ ನಿರ್ಮಾಣವಾದ ರಿಕ್ಷಾ ನಿಲ್ದಾಣದ ಉದ್ಘಾಟನೆ ನಡೆಯಿತು.
ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಟೀಲ್ ಕಪಾಟು,ಮತ್ತು ರಾಜ್ಯಮಟ್ಟದ ಹರ್ಡಲ್ಸ್ ನಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯನ್ನು ಸನ್ಮಾನಿಸಿ,ಪ್ರೊತ್ಸಾಹ ಧನ ನೀಡಲಾಯಿತು.ರೂ.1 ಲಕ್ಷ ವನ್ನು ದತ್ತಿನಿಧಿ ಸ್ಥಾಪನೆ ಮಾಡಲಾಯಿತು.


ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಯಾಸ್ ನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಬೆಳ್ಳಾರೆ ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಅಧ್ಯಕ್ಷ ಶಶಿಧರ ಬಿ.ಕೆ, ಕಾರ್ಯದರ್ಶಿ ವಿಶ್ವನಾಥ ಕೆ, ಝೋನಲ್ ಲೆಪ್ಟಿನೆಂಟ್ ಪದ್ಮನಾಭ ಬೀಡು, ಡಿ.ಸಿ.ಸಿ.ಬ್ಯಾಂಕಿನ ನಿರ್ದೇಶಕ ಮನ್ಮಥ ಎಸ್.ಎನ್, ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಹಿರಿಯರಾದ ನೆಕ್ರೆಪ್ಪಾಡಿ ಕೃಷ್ಣಪ್ಪ ಗೌಡ, ರೊ.ಎ.ಕೆ.ಮಣಿಯಾಣಿ, ರೊ.ರವೀಂದ್ರ ಗೌಡ,ರೊ.ಶ್ಯಾಮಸುಂದರ ರೈ, ರೊ.ಬಾಲಕೃಷ್ಣ ಗೌಡ, ಪ್ರಸಾದ್ ಕತ್ಲಡ್ಕ, ರೊ.ಪ್ರಭಾಕರ ಆಳ್ವ, ರೊ.ನವೀನ ರೈ ತಂಬಿನಮಕ್ಕಿ,ರೊ.ವಿನಯ ಕುಮಾರ್ ,ರೊ.ಮೋನಪ್ಪ ತಂಬಿನಮಕ್ಕಿ,ರೊ.ಪ್ರಮೋದ್ ಕೆ.ಕೆ,ಪ್ರಮೋದ್ ಕುಂಟುಪುನಿಗುತ್ತು,ಕರುಣಾಕರ ಆಳ್ವ, ಜಯಪ್ರಕಾಶ್ ಪೆರುವಾಜೆ,ಪ್ರಮೋದ್ ರೈ ಹಾಗೂ ರೋಟರಿ ಸದಸ್ಯರು,ರಿಕ್ಷಾ ಚಾಲಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.