ಹಾಲೆಮಜಲು : ಕಾರು ಮತ್ತು ಬೈಕ್ ಭೀಕರ ಅಪಘಾತ

0


ನಾಲ್ಕೂರು ಗ್ರಾಮದ ಹಾಲೆಮಜಲು ಎಂಬಲ್ಲಿ ಕಾರು ಮತ್ತು ಬೈಕ್ ಅಪಘಾತವಾದ ಘಟನೆ ಇಂದು ಸಂಭವಿಸಿದೆ.


ಗುತ್ತಿಗಾರು ಕಡೆಯಿಂದ ಸುಬ್ರಮಣ್ಯ ಕಡೆಗೆ ಹೋಗುವ ಆಲ್ಟೊ ಕಾರು ಹಾಗೂ ಸುಬ್ರಹ್ಮಣ್ಯ ಕಡೆಯಿಂದ ಗುತ್ತಿಗಾರು ಕಡೆಗೆ ಬರುವ ಬೈಕ್ ಹಾಲೆಮಜಲು ತಿರುವಿನಲ್ಲಿ ಪರಸ್ಪರ ಡಿಕ್ಕಿ ಹೊಡೆದು ಡಿಕ್ಕಿಯ ರಭಸಕ್ಕೆ ಬೈಕ್ ಮುಂಭಾಗ ತುಂಡಾಗಿ ಬಿದ್ದಿದೆ. ಕಾರು ಪಕ್ಕದ ತೋಟದ ಬದಿಗೆ ಪಲ್ಟಿಯಾಗಿ ಬಿದ್ದಿದ್ದು, ಬೈಕು ಸವಾರನಿಗೆ ಗಾಯಗಳಾಗಿದೆ. ಬೈಕ್ ಸವಾರ ವಿರುದ್ಧ ದಿಕ್ಕಿನಲ್ಲಿ ಬಂದದ್ದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.


ಗಾಯಾಳು ಬೈಕ್ ಸವಾರನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದಾರೆ. ಕಾರು ಚಾಲಕ ಪ್ರಾಣಾಪಾಯದಿಂದದಿಂದ ಪಾರಾಗಿದ್ದಾರೆ.