ಮರ್ಕಂಜ : ಬಲ್ನಾಡುಪೇಟೆ ಶ್ರೀ ಆದೀಶ್ವರ ಸ್ವಾಮಿ ಬಸದಿಯ ಅಭಿವೃದ್ಧಿಗಾಗಿ ಧರ್ಮಸ್ಥಳದಿಂದ ಮಂಜೂರಾದ ಅನುದಾನ ಹಸ್ತಾಂತರ

0

*ಮರ್ಕಂಜ ಗ್ರಾಮದ ಬಲ್ನಾಡುಪೇಟೆ ಶ್ರೀ ಆದೀಶ್ವರ ಸ್ವಾಮಿ ಬಸದಿಯ ಅಭಿವೃದ್ಧಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ ರೂಪಾಯಿ 1,00,000 ಅನುದಾನದ ಡಿ.ಡಿ. ಯನ್ನು ಎ.2ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಳ್ಯ ತಾಲ್ಲೂಕಿನ ಯೋಜನಾಧಿಕಾರಿ ನಾಗೇಶ್.ಪಿ ರವರು ಬಸದಿಯ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮರ್ಕಂಜದ ಆದೀಶ್ವರ ಸ್ವಾಮಿ ಬಸದಿಯ ಆಡಳಿತ ಮೊಕ್ತೇಸರ ಮತ್ತು ಪಂಚಸ್ಥಾಪನೆಯ ಮಾಜಿ ಆಡಳಿತ ಮೊಕ್ತೆಸರ ಯುವರಾಜ ಜೈನ್, ಬಸದಿಯ ಆಡಳಿತ ಮಂಡಳಿಯ ಅಧ್ಯಕ್ಷ ನಾಗಕುಮಾರ ಶೆಟ್ಟಿ ಹಾಗೂ ಆಡಳಿತ ಮಂಡಳಿಯ ಮುಖ್ಯಸ್ಥರುಗಳಾದ ಸುಭಾಷ್ ಚಂದ್ರ ಶೆಟ್ಟಿ, ಕೃಷ್ಣರಾಜಶೆಟ್ಟಿ, ವಿದ್ಯಾಧರ ಹಾಗೂ ಸುಳ್ಯ ತಾಲೂಕು ಜನಜಾಗೃತಿಯ ಪದ್ಮನಾಭ ಶೆಟ್ಟಿ, ಧರ್ಮಸ್ಥಳ ಯೋಜನೆಯ ಸಂಪಾಜೆ ವಲಯ ಮೇಲ್ವಿಚಾರಕಿ ಜಯಶ್ರೀ, ಮರ್ಕಂಜ ಒಕ್ಕೂಟದ ಅಧ್ಯಕ್ಷರಾದ ಗೋಪಾಲಕೃಷ್ಣ ಬಲ್ಕಾಡಿ, ನಿಕಟ ಪೂರ್ವ ಅಧ್ಯಕ್ಷ ನಯನ ಕುಮಾರ್ ಜೈನ್, ಸೇವಾ ಪ್ರತಿನಿಧಿಗಳಾದ ನಿತ್ಯಾನಂದ ಭೀಮಗುಳಿ ಹಾಗೂ ರೋಹಿಣಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪದ್ಮನಾಭ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆ ಗೈದರು. ವಲಯ ಮೇಲ್ವಿಚಾರಕರಾದ ಜಯಶ್ರೀ ಧನ್ಯವಾದ ಸುಮರ್ಪಿಸಿದರು.