ಪಕ್ಷೇತರ ಅಭ್ಯರ್ಥಿಯಾಗಿ ಸುಳ್ಯದ ಸತೀಶ್ ಬೂಡುಮಕ್ಕಿ ನಾಮಪತ್ರ ಸಲ್ಲಿಕೆ

0

ನಾಮಪತ್ರಗಳ ಸಲ್ಲಿಕೆಯ ಅಂತಿಮ ದಿನವಾದ ಏ.4ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸುಳ್ಯದ ಸತೀಶ್ ಬೂಡುಮಕ್ಕಿ ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಸುಳ್ಯ ಅಜ್ಜಾವರ ಗ್ರಾಮದ ಮುಳ್ಯದವರಾದ ಸತೀಶ್ ಬೂಡುಮಕ್ಕಿ ಅಂಬೇಡ್ಕ‌ರ್ ಆದರ್ಶ ಸೇವಾ ಸಮಿತಿಯ ಸುಳ್ಯ ತಾಲೂಕು ಅಧ್ಯಕ್ಷ ಹಾಗು ಜನ ಅಭಿವೃದ್ಧಿ ವೇದಿಕೆಯ ತಾಲೂಕು ಅಧ್ಯಕ್ಷರಾಗಿದ್ದಾರೆ.