ಕೆವಿಜಿ ಪಾಲಿಟೆಕ್ನಿಕ್: ರೀಸೆಂಟ್ ಟ್ರೆಂಡ್ಸ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ಬಗ್ಗೆ ಉಪನ್ಯಾಸ

0

ಸುಳ್ಯದ ಕುರುಂಜಿ ವೆಂಕಟರಮಣ ಗೌಡ ಪಾಲಿಟೆಕ್ನಿಕ್ ನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿ ಸಂಘದ ವತಿಯಿಂದ ರೀಸೆಂಟ್ ಟ್ರೆಂಡ್ಸ್ ಇನ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮೆಷಿನ್ ಲರ್ನಿಂಗ್ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕೆವಿಜಿ ಕಾಲೇಜ್ ಆಫ್ ಇಂಜಿನಿಯರಿಂಗ್ ನ ಕಂಪ್ಯೂಟರ್ ಸೈನ್ಸ್ ( ಕ್ರತಕ ಬುದ್ಧಿಮತ್ತೆ ) ವಿಭಾಗದ ಮುಖ್ಯಸ್ಥೆ ಡಾ. ಸವಿತಾ ಸಿ. ಕೆ ಹಾಗೂ ಪ್ರಾಧ್ಯಾಪಕ ವೆಂಕಟೇಶ್ ಯು ಕೃತಕ ಬುದ್ಧಿಮತ್ತೆಯಲ್ಲಿ ಇತ್ತೀಚಿಗಿನ ಪ್ರವೃತ್ತಿಗಳ ಬಗ್ಗೆ ಮತ್ತು ಮೆಷೀನ್ ಲರ್ನಿಂಗ್ ವಿಷಯದಲ್ಲಿ ಮಾಹಿತಿ ನೀಡಿದರು.


ಕಾಲೇಜಿನ ಪ್ರಾಂಶುಪಾಲ ಶ್ರೀಧರ್ ಎಮ್. ಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ವಿಭಾಗದ ಮುಖ್ಯಸ್ಥ ವಿವೇಕ್ ಪಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಅಣ್ಣಯ್ಯ ಕೆ, ವಿದ್ಯಾರ್ಥಿ ಆಪ್ತ ಸಮಾಲೋಚಕ ರಂಗಸ್ವಾಮಿ ಹಾಗೂ ವಿದ್ಯಾರ್ಥಿ ಸಂಘದ ಸಲಹೆಗಾರ ಮಹೇಶ್ ಗೊರವರ್ ಉಪಸ್ಥಿತರಿದ್ದರು. ಕು. ಸಂಧ್ಯಾ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ರೋಕ್ಷನ್ ಸ್ವಾಗತಿಸಿ, ಕು.ಅಪೂರ್ವ ವಂದಿಸಿದರು.