ಧರ್ಮಸ್ಥಳ ಯೋಜನೆ – ಸೆಲ್ಕೋ ಸೋಲಾರ್ ವತಿಯಿಂದ ಸೋಲಾರ್ ಲೈಟ್ – ಫ್ಯಾನ್ ಕೊಡುಗೆ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಜ್ಜಾವರ ವಲಯ ಕಾಂತಮಂಗಲ ಒಕ್ಕೂಟ ಮತ್ತು ಸೆಲ್ಕೋ ಸೋಲಾರ್ ವತಿಯಿಂದ ಕಾಂತಮಂಗಲ ಶಾಲೆಯ ಸಭಾಭವನದಲ್ಲಿ ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಸೋಲಾರ್ ಲೈಟ್ ಮತ್ತು ಫ್ಯಾನ್ ವಿತರಣೆ ಮಾಡಲಾಯಿತು. ಈ ಸಂದರ್ಭ ಶಾಲಾ ಮುಖ್ಯೋಪಾಧ್ಯಾಯರು ಸ್ವರ್ಣ ಲತಾ , ಸಹ ಶಿಕ್ಷಕರು, ಸೆಲ್ಕೋ ಸೋಲಾರ್ ಸಿಬ್ಬಂದಿ ರಂಜಿತ್ ಮತ್ತು ಜಗನ್ನಾಥ, ವಲಯದ ಮೇಲ್ವಿಚಾರಕರು ವಿಶಾಲ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಮಂಜುಳಾ, ಒಕ್ಕೂಟದ ಅಧ್ಯಕ್ಷರುಗಳಾದ ಚಂದ್ರಶೇಖರ್ ಮತ್ತು ಸತೀಶ್ ಕಾರ್ಯದರ್ಶಿಯಾದ ಸರಿತಾ ಸೇವಾ ಪ್ರತಿನಿಧಿ ಸೌಮ್ಯ ಮತ್ತು ಉಷಾ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿ ಶಾಲಾ ವಿದ್ಯಾರ್ಥಿ ನಾಯಕಿಯರಿಂದ ಸೋಲಾರ್ ಉದ್ಘಾಟನೆ ಮಾಡಲಾಯಿತು