ಬೆಳ್ಳಿಪ್ಪಾಡಿ-ದೇವರಗುಂಡದಲ್ಲಿ ದೈವಗಳ ನಡಾವಳಿ

0

ಮಂಡೆಕೋಲು ಗ್ರಾಮದ ಬೆಳ್ಳಿಪ್ಪಾಡಿ – ದೇವರಗುಂಡ ತರವಾಡು ಟ್ರಸ್ಟ್ ಇದರ ಆಶ್ರಯದಲ್ಲಿ ಶ್ರೀ ಧರ್ಮದೈವ ಮತ್ತು ಉಪದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ನಡಾವಳಿ ಎ.9ಮತ್ತು 10ರಂದು ನಡೆಯಿತು.

ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನ ಹಾಗೂ ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.9ರಂದು ಬೆಳಗ್ಗೆ ಗಣಪತಿ ಹವನ, ಬಳಿಕ ಶುದ್ಧಿ ಕಲಶ, ನಾಗದೇವರಿಗೆ ಅಭಿಷೇಕ ನಡೆದ ಬಳಿಕ ಶ್ರೀ ವೆಂಕಟರಮಣ ದೇವರ ಹರಿಸೇವೆ, ಪ್ರತಿಷ್ಠಾ ವಾರ್ಷಿಕೋತ್ಸವ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.

ಸಂಜೆ ಶ್ರೀ ಗುರುಕಾರ್ನೋರಿಗೆ ಬಡಿಸಿ ಬಳಿಕ ಶ್ರೀ ದೈವಗಳ ಭಂಡಾರ ತೆಗೆದು ಬೂಳ್ಯ ಕೊಡಲಾಯಿತು.
ರಾತ್ರಿ ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಶ್ರೀ ವರ್ಣಾರ ಪಂಜುರ್ಲಿ ದೈವದ ನಡಾವಳಿ, ಶ್ರೀ ಪಿಲಿಭೂತ ದೈವದ ನಡಾವಳಿ, ಶ್ರೀ ಪುರುಷ ಭೂತ ದೈವದ ನಡಾವಳಿ ಹಾಗೂ ಪ್ರಸಾದ ವಿತರಣೆ ನಡೆಯಿತು.

ಎ.10ರಂದು ಶ್ರೀ ರುದ್ರಚಾಮುಂಡಿ ಧರ್ಮದೈವದ ನಡಾವಳಿ ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಸಂಜೆ ಶ್ರೀ ಗುಳಿಗ ದೈವದ ನಡಾವಳಿ, ಶ್ರೀ ಕೊರತಿ ದೇವತೆ ನಡಾವಳಿ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ಪುತ್ತೂರು ಮಾಜಿ ಶಾಸಕ ಸಂಜೀವ ಮಟoದೂರು,
ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ಸೇರಿದಂತೆ ಕುಟುಂಬಸ್ಥರು, ಊರಿನವರು ಭಾಗವಹಿಸಿದ್ದರು.