ಪೆರುವಾಜೆ : ಆಕ್ಟಿವಾ ಮರಕ್ಕೆ ಡಿಕ್ಕಿಯಾಗಿ ಯುವಕ ಮೃತ್ಯು

0

ಪೆರುವಾಜೆಯಲ್ಲಿ ಆಕ್ಟಿವಾ ಮರಕ್ಕೆ ಡಿಕ್ಕಿಯಾಗಿ ಯುವಕನೋರ್ವ ಮೃತಪಟ್ಟ ಘಟನೆ ಇಂದು ರಾತ್ರಿ ನಡೆದಿದೆ.
ಪೆರುವಾಜೆ ಸಮೀಪ ಬೆಳ್ಳಾರೆಯ ಉಮಿಕ್ಕಳ ಮಹಮ್ಮದ್ ರಾಝಿಕ್ ಎಂಬ ಯುವಕ ಚಲಾಯಿಸಿಕೊಂಡು ಬರುತ್ತಿದ್ದ ಆಕ್ಟಿವಾ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿಯಾಗಿದ್ದು ಗಂಭೀರ ಗಾಯಗೊಂಡ ಯುವಕ ಮೃತಪಟ್ಡಿರುವುದಾಗಿ ತಿಳಿದುಬಂದಿದೆ.
ಮೃತದೇಹವು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿರುವುದಾಗಿ ತಿಳಿದು ಬಂದಿದೆ.