ಸುಳ್ಯ ಪೊಲೀಸ್ ಸ್ಟೇಷನ್ ಬಳಿ ಪೈಪ್ ಒಡೆದು ಕುಡಿಯುವ ನೀರು ಪೋಲು

0

ಸುಳ್ಯ ಗಾಂಧಿನಗರ ಮುಖ್ಯ ರಸ್ತೆ ಪೊಲೀಸ್ ಠಾಣೆ ಬಳಿ ಕಟ್ಟೆಕ್ಕಾರ್ ಅಂಗಡಿಯ ಮುಂಭಾಗ ನಗರ ಪಂಚಾಯತ್ ಕುಡಿಯುವ ನೀರಿನ ಪೈಪ್ ಒಡೆದು ಅಪಾರ ನೀರು ಪೋಲಾಗುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಈ ರೀತಿ ನೀರು ಪೋಲಾಗುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.