ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಸಂಭ್ರಮ

0

ದೊಡ್ಡದರ್ಶನ ಬಲಿ – ಬಟ್ಟಲುಕಾಣಿಕೆ – ಇಂದು ರಾತ್ರಿ ವಾಲಸಿರಿ ಉತ್ಸವ

ಸುಳ್ಯಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೋತ್ಸವ ಜರುಗುತ್ತಿದ್ದು, ಇಂದು ದೇಗುಲದಲ್ಲಿ ದೊಡ್ಡದರ್ಶನ ಬಲಿ, ಬಟ್ಟಲುಕಾಣಿಕೆ ನಡೆಯಿತು.’

ಬೆಳಿಗ್ಗೆ ಉತ್ಸವ ಬಲಿ ಹೊರಟು ಬಳಿಕ ದೊಡ್ಡದರ್ಶನ ಬಲಿ, ಬಟ್ಟಲುಕಾಣಿಕೆ ನಡೆಯಿತು.

ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಅವಿನ್ ರಂಗತ್ ಮಲೆ, ದೇವಸ್ಥಾನದ ವ್ಯವಸ್ಥಾಪಕ ಆನಂದ ಕಲ್ಲುಗದ್ದೆ, ಮಾಜಿ ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಉಪಸ್ಥಿತರಿದ್ದರು.

ಇಂದು ರಾತ್ರಿ ಬಲಿ ಹೊರಟು ವಾಲಸಿರಿ ಉತ್ಸವ ಜರುಗಲಿದೆ.