ಮತದಾನ ಜಾಗೃತಿಗಾಗಿ ಸುದ್ದಿ ಮತದಾರರ ಕಡೆಗೆ

0

ನಿಂತಿಕಲ್ಲಿನಲ್ಲಿ ಸುದ್ದಿ ಚುನಾವಣಾ ಕುರುಕ್ಷೇತ್ರ

ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸುತ್ತದೆ: ಬಿಜೆಪಿ

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮತದಾರ ನಮ್ಮ ಕೈ ಹಿಡಿಯಲಿದ್ದಾರೆ : ಕಾಂಗ್ರೆಸ್

ಸೌಜನ್ಯ ನ್ಯಾಯಕ್ಕಾಗಿ ನೋಟಾ ಬೆಂಬಲಿಸಿ: ಹೋರಾಟಗಾರರು

ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಸುದ್ದಿಯ ವತಿಯಿಂದ “ಚುನಾವಣಾ ಕುರುಕ್ಷೇತ್ರ ” ಎಂಬ ವಿನೂತನ ಕಾರ್ಯಕ್ರಮ ನಿನ್ನೆ ನಿಂತಿಕಲ್ಲಿನಲ್ಲಿ ಚಿತ್ರೀಕರಣಗೊಂಡಿತು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳು, ವಿವಿಧ ಯೋಜನೆಗಳು ಫಲಾನುಭವಿಗಳಿಗೆ ನೇರವಾಗಿ ತಲುಪಿದ್ದು, ಮತದಾರರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಬಿಜೆಪಿ ನಾಯಕರು ವಾದಿಸಿದರೆ, ಕೊಟ್ಟ ಮಾತಿನಂತೆ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ನಡೆದುಕೊಂಡು 5 ಗ್ಯಾರಂಟಿಗಳನ್ನು ಜನರಿಗೆ ನೀಡಿದೆ. ರಾಜ್ಯದಲ್ಲಿ ಪ್ರತೀ ಕುಟುಂಬವೂ ಒಂದಲ್ಲಾ ಒಂದು ಗ್ಯಾರಂಟಿಯ ಲಾಭ ಪಡೆದುಕೊಂಡಿದೆ. ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದರೂ ಸರಕಾರ ಜನಪರವಾಗಿರುತ್ತದೆ ಎಂದು ಕಾಂಗ್ರೆಸ್ ನಾಯಕರುಬವಾದಿಸಿದರು. ಸೌಜನ್ಯ ಪರ ಹೋರಾಟಗಾರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಸೌಜನ್ಯಳ ಕುಟುಂಬಕ್ಕಾದ ನೋವು ಬೇರೆ ಮನೆಗಳಿಗೆ ಬರಬಾರದೆಂದಾದರೆ ನೋಟಾ ಮತ ಚಲಾಯಿಸಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂ.ಎಸ್. ಮಹಮ್ಮದ್, ಆರ್.ಕೆ. ಭಟ್ ಕುರುಂಬುಡೇಲು, ಎನ್.ಜಿ. ಲೋಕನಾಥ್ ರೈ , ವಸಂತ ನಡುಬೈಲು, ಅಬ್ದುಲ್ ಗಫೂರ್ ಕಲ್ಮಡ್ಕ, ರಾಮಕೃಷ್ಣ ರೈ ಮಾಲೆಂಗ್ರಿ, ಕರುಣಾಕರ ಗೌಡ ಹುದೇರಿ, ಜಯಂತ್ ಟಿ. ಎನ್.ಟಿ. ವಸಂತ, ರಾಮಣ್ಣ ಜಾಲ್ತಾರು, ಮಾಯಿಲಪ್ಪ ಗೌಡ ಪಟ್ಟೆ, ಪ್ರವೀಣ ರೈ ಮರುವಂಜ, ಅನೂಪ್ ಬಿಳಿಮಲೆ, ಎ.ಬಿ. ಮೊಯಿದ್ಧೀನ್, ಅಬೂಬಕ್ಕರ್ ಅರಫ, ವೆಂಕಟ್ರಮಣ ಮರ್ದೂರು, ಸತೀಶ್ ಪೊಗ್ಗೋಲಿ, ಬಾಲಕೃಷ್ಣ ರೈ ಪಿಜಕ್ಕಳ, ಗೌತಮ್, ತಾರಾನಾಥ ಪೂದೆಕೊಚ್ಚಿ, ದಿವ್ಯ ಡಿ.ಎಸ್, ಮಹಮ್ಮದ್ ಗುತ್ತಿಗೆ ಮತ್ತಿತರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಸುದ್ದಿ ಚಾನೆಲ್‌ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಕಾರ್ಯಕ್ರಮ ನಡೆಸಿಕೊಟ್ಟರು. ಸುದ್ದಿ ವರದಿಗಾರ ಈಶ್ವರ ವಾರಣಾಶಿ, ಪ್ರತಿನಿಧಿ ಸಂಕಪ್ಪ ಸಾಲ್ಯಾನ್, ಸುದ್ದಿ ಚಾನೆಲ್ ನ ರಕ್ಷಿತ್ ಕುಕ್ಕುಜಡ್ಕ ಮತ್ತು ಕೌಶಿಕ್ ಬಳ್ಳಕ್ಕ ಸಹಕರಿಸಿದರು.