ಕಳಂಜ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಟ್ರಸ್ಟ್ ಇದರ ನೂತನ ಸಮಿತಿ ರಚನೆ

0

ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಟ್ರಸ್ಟ್ ನ ಅಧ್ಯಕ್ಷ ಕರುಣಾಕರ ರೈ ನಾಲ್ಗುತ್ತುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇದರ 2024-25ರ ನೂತನ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ರಘುನಾಥ ರೈ ಕಳಂಜ, ಅಧ್ಯಕ್ಷರಾಗಿ ಕರುಣಾಕರ ಶೆಟ್ಟಿ ನಾಲ್ಗುತ್ತು, ಕಾರ್ಯದರ್ಶಿಯಾಗಿ ಸತೀಶ್ ಕಳಂಜ, ಉಪಾಧ್ಯಕ್ಷರಾಗಿ ರವೀಂದ್ರನಾಥ ರೈ ಗುರಿಕ್ಕಾನ, ಖಜಾಂಜಿಯಾಗಿ ರಾಜೇಶ್ ಅಮೀನ್ ಪಟ್ಟೆ, ಜೊತೆ ಕಾರ್ಯದರ್ಶಿಯಾಗಿ ಗಗನ್ ನಾಲ್ಗುತ್ತು ಇವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಸರ್ವ ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.