ಪಂಜ:ಬಿಪಿನ್ ಬೊಳ್ಳಾಜೆ ಬಿಜೆಪಿಗೆ ಸೇರ್ಪಡೆ

0

ಪಂಜದ ಐವತ್ತೊಕ್ಲು 2ನೇ ವಾರ್ಡಿನ ಬಿಜೆಪಿ ಬೂತ್ ಸಭೆಯು ಏ.18 ರಂದು ಗೌತಮ್ ಬೊಳ್ಳಾಜೆ ರವರ ಮನೆಯಲ್ಲಿ ನಡೆಯಿತು.


ಇದೇ ವೇಳೆ ಕಾಂಗ್ರೆಸ್ ನಿಂದ ಬೇಸತ್ತು, ನರೇಂದ್ರ ಮೋದಿ ಯವರ ನಾಯಕತ್ವವನ್ನು ಮೆಚ್ಚಿಕೊಂಡು ಬಿಪಿನ್ ಬೊಳ್ಳಾಜೆ ಹಾಗೂ ಅವರ ಮನೆಯವರು ಅಧಿಕೃತವಾಗಿ ಬಿಜೆಪಿ ಸೇರ್ಪಡೆಗೊಂಡರು.


ಬೆಳ್ಳಾರೆ ಮಹಾ ಶಕ್ತಿಕೇಂದ್ರದ ಅಧ್ಯಕ್ಷರಾದ ಅಜಿತ್ ರಾವ್ ಕಿಲಂಗೊಡಿ, ತಾಲೂಕು ರೈತ ಮೊರ್ಚಾದ ಅಧ್ಯಕ್ಷ ಚಂದ್ರಶೇಖರ ಶಾಸ್ತ್ರಿ, ಹಾಗೂ ಪಂಜ ಶಕ್ತಿ ಕೇಂದ್ರದ ಪ್ರಮುಖರಾದ ಲಿಗೋಧರ ಆಚಾರ್ಯ ರವರ ಸಮ್ಮುಖದಲ್ಲಿ ನಡೆಯಿತು.ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.