ಮುದ್ದು ಮಕ್ಕಳ ನೆಚ್ಚಿನ ಶಿಕ್ಷಕಿಯರಾಗಲು ಇಲ್ಲಿದೆ ಅವಕಾಶ

0

ಬೆಳ್ಳಾರೆ ಜ್ಞಾನದೀಪದಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಗೆ ಅರ್ಜಿ ಆಹ್ವಾನ

ಜ್ಞಾನದ ಜಗತ್ತನ್ನು ಏರುವ ಮೊದಲ ಮೆಟ್ಟಿಲು ಪೂರ್ವ ಪ್ರಾಥಮಿಕ ಶಿಕ್ಷಣ, ಮನೆಗಳಿಂದ ಶಿಕ್ಷಣ ಪ್ರಪಂಚದೆಡೆ ಹೊರ ಬರುತ್ತಿರುವ ಪುಟಾಣಿಗಳಿಗೆ ಶಿಕ್ಷಣ ನೀಡುವ ಕಾಯಕವನ್ನು ಮೊಂಟೆಸ್ಸರಿ/ನರ್ಸರಿ ಶಿಕ್ಷಕೀಯರೇ ಮಾಡಬೇಕಿದೆ‌. ಸದ್ದಿಲ್ಲದೇ ನಡೆಯುತ್ತಿರುವ ಶಿಕ್ಷಣ ಸೇವೆಯ ಜೊತೆಗೆ ತನ್ನ ಉತ್ಕೃಷ್ಟ ತರಬೇತಿಯೊಂದಿಗೆ ಇಂತಹ ಅನೇಕ ಮೊಂಟೆಸ್ಸರಿ ಶಿಕ್ಷಕಿಯರನ್ನು ಬೆಳ್ಳಾರೆ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಿದೆ.
ಶಿಕ್ಷಕಿಯರ ತರಬೇತಿಯನ್ನು ವಿಭಿನ್ನವಾಗಿ ನಡೆಸುತ್ತಿರುವ ಜ್ಞಾನದೀಪ
ಮಗುವಿಗೆ ಗುರುತಿಸಿ ಕಲಿಯಲು ಅನುವು ಮಾಡಿಕೂಡುವ ಕಲಿಕಾ ಪದ್ಧತಿಯಾದ ಮೊಂಟೆಸ್ಸರಿ ವಿಧಾನದ ವಿವಿಧ ಅಧ್ಯಯನ ಮಾದರಿಗಳನ್ನು ತಯಾರಿಸುವುದು ಅವುಗಳನ್ನು ಉಪಯೋಗಿಸಿಕೂಂಡು ಮಗುವಿಗೆ ಪರಿಣಾಮಕಾರಿಯಾಗಿ ಭೋಧಿಸುವ ವಿಧಾನಗಳನ್ನು ಕಲಿಸಿಕೊಡಲಾಗುತ್ತದೆ.

ಕೇಂದ್ರ ಸರ್ಕಾರದ ನಿರುದ್ಯೋಗ ನಿರ್ಮೂಲನ ಏಜೆನ್ಸಿಯಾದ ಭಾರತ್ ಸೇವಕ್ ಸಮಾಜದ ವತಿಯಿಂದ ಈ ತರಬೇತಿಯನ್ನು ನಡೆಸಲಾಗುತ್ತಿದ್ದು , ಸಂಸ್ಥೆಯ ಮೂಲಕ ತರಬೇತಿ ಪಡೆದ ತರಬೇತಿ ಶಿಕ್ಷಕಿಯರು ಒಂದು ವರ್ಷದಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳು ,ದಾಖಲೆಗಳು,ಪ್ರಾಜೆಕ್ಟ್ ಗಳು ಸೇರಿದಂತೆ ಮಗುವಿಗೆ ಕಲಿಸಲು ಸಹಕಾರಿಯಾದ ಅಧ್ಯಯನ ಪರಿಕರಗಳನ್ನು ತಾವೇ ತಯಾರಿಸಿ ಪ್ರದರ್ಶನದ ಮೂಲಕ ವಿವರಿಸುತ್ತಾರೆ.

ನಲಿಕಲಿ ಮಾದರಿಯಲ್ಲಿ ಮಕ್ಕಳಿಗೆ ಕಥೆ ಹೇಳಿ ಕೂಡುವುದು,ಪದ್ಯಗಳನ್ನು ರಚಿಸಿ ಹಾಡುವುದನ್ನು ಇಲ್ಲಿ ಕಲಿಸಲಾಗುತ್ತದೆ , ಪ್ರತಿ ವರ್ಷವು ಇಲ್ಲಿಯ ತರಬೇತಿ ಶಿಕ್ಷಕಿಯರು ಪ್ರದರ್ಶಿಸುವ ಪಾರಂಪರಿಕ ವಸ್ತುಗಳು ಗಮನ ಸೆಳೆಯುತ್ತದೆ.
ಪರಿಸರವನ್ನು ಗುರುತ್ತಿಸಿ ವಿವಿಧ ಸಸ್ಯಗಳ ಬೇರು,ಬೀಜ,ವಿವಿಧ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಗುರುತಿಸುವುದನ್ನು ಕಲಿಯುತ್ತಾರೆ. ಅಲಂಕಾರಿಕ ವಸ್ತುಗಳ ತಯಾರಿ, ಪೇಪರ್ ಕ್ರಾಫ್ಟ್,ಚಿತ್ರಕಲೆ,ಕಸದಿಂದ ರಸ ಸೇರಿದಂತೆ ವಿವಿಧ ಕೌಶಲ್ಯ ತರಬೇತಿಗಳನ್ನು ,ವಿಶೇಷ ಕಾರ್ಯಗಾರ,ವಿಚಾರಗೋಷ್ಟಿಗಳನ್ನು ನಡೆಸಲಾಗುತ್ತಿದೆ. ತರಬೇತಿ ಜೊತೆಯಲ್ಲಿ ಉಚಿತ ಇಂಗ್ಲೀಷ್ ಸಂವಹನ ಮತ್ತು ಕಂಪ್ಯೂಟರ್ ಶಿಕ್ಷಣವನ್ನು ನೀಡಲಾಗುತ್ತದೆ.


ಒಟ್ಟಿನಲ್ಲಿ ಮಗುವಿಗೆ ಎಲ್ಲಾ ಅಂಶಗಳನ್ನು ಪೂರ್ವ ಪ್ರಾಥಮಿಕ ಹಂತದಲ್ಲಿ ಬೆಳೆಸಲು ಸಹಾಕರಿಯಾಗಬಲ್ಲ ಶಿಕ್ಷಣವನ್ನು ಹೇಗೆ ನೀಡಬಹುದು ಎಂಬುದನ್ನು ಕಲಿಸಿಕೂಡುವ ಮೂಲಕ ಉತ್ತಮ ಶಿಕ್ಷಕಿಯರನ್ನು ಸಂಸ್ಥೆ ರೂಪಿಸುತ್ತಿದೆ. ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗ್ರಾಮೀಣ ಭಾಗದ ನಿರುದ್ಯೋಗಿ ಯುವತಿಯರಿಗೆ ಈ ತರಬೇತಿ ಪಡೆದು ಶಿಕ್ಷಕಿಯಾಗಿ ಅಥವಾ ಸ್ವತಃ ನರ್ಸರಿ ಶಾಲೆಗಳನ್ನು ತೆರೆದು ಭವಿಷ್ಯ ರೂಪಿಸಲು ಈ ತರಬೇತಿ
ಸಹಕರಿಯಾಗಿದೆ. ಒಂದು ವರ್ಷದ
ತರಬೇತಿಗೆ ಸೇರಲಿಚ್ಚಿಸುವವರು ಬೆಳ್ಳಾರೆ ಯ ದೇವಿ ಹೈಟ್ಸ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜ್ಞಾನದೀಪ ಸಂಸ್ಥೆಯ ಕಛೇರಿ ಯನ್ನು ಸಂರ್ಪಿಕಿಸಬಹುದೆಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.