ದುಗಲಡ್ಕದಲ್ಲಿ ಸುದ್ದಿ ಚುನಾವಣಾ ಕುರುಕ್ಷೇತ್ರ

0

ಮೋದಿ ಸರಕಾರದ ಸಾಧನೆಗಳಿಂದಲೇ ಬಿಜೆಪಿಗೆ ಗೆಲುವು; ಬಿಜೆಪಿ

ದೇಶದ ಅಭಿವೃದ್ಧಿಗೆ ಕಾಂಗ್ರೆಸ್ಸೇ ಕಾರಣ; ಕಾಂಗ್ರೆಸ್

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ ಸುದ್ದಿಯ ವತಿಯಿಂದ ಮತದಾನ ಜಾಗೃತಿಗಾಗಿ ಸುದ್ದಿ ಚುನಾವಣಾ ಕುರುಕ್ಷೇತ್ರ ಕಾರ್ಯಕ್ರಮ ದುಗ್ಗಲಡ್ಕದಲ್ಲಿ ಏ.19ರಂದು ಚಿತ್ರೀಕರಣ ಗೊಂಡಿತು.


ಮೋದಿಯವರು ಕಳೆದ ಹತ್ತು ವರ್ಷಗಳಿಂದ ನಡೆಸಿದ ಉತ್ತಮ ಆಡಳಿತದಿಂದಾಗಿ ಮತ್ತೆ ಜನರು ಬಿಜೆಪಿಯನ್ನೇ ಆರಿಸುತ್ತಾರೆ ಎಂದು ಬಿಜೆಪಿ ಮುಖಂಡರು ವಾದಿಸಿದರೆ,ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷ ಬಹಳ ಕೊಡುಗೆ ನೀಡಿದೆ. ಆದ್ದರಿಂದ ಕಾಂಗ್ರೆಸ್ಸನ್ನೇ ಜನರು ಆರಿಸುತ್ತಾರೆ ಎಂದು ಕಾಂಗ್ರೆಸ್ ನವರು ಪ್ರತಿಪಾದಿಸಿದರು. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನ ನೆಮ್ಮದಿಯಿಂದ ಜೀವನ ನಡೆಸುತ್ತಾರೆ ಎಂದು ಕಾಂಗ್ರೆಸ್ ನವರು ಹೇಳಿದರೆ,ಇಂತಹ ಬಿಟ್ಟಿ ಭಾಗ್ಯ ಜನರಿಗೆ ಬೇಕಾಗಿಲ್ಲ. ಅದು ಎಲ್ಲರಿಗೂ ಸಿಗುತ್ತಿಲ್ಲ, ಇದರಿಂದಾಗಿ ರಾಜ್ಯ ಸರಕಾರ ಸಾಲದಲ್ಲಿ ಮುಳುಗಿದೆ.ಎಂದು ಬಿಜೆಪಿಯವರು ಹೇಳಿದರು. ವಿಪರೀತ ಬೆಳೆ ಏರಿಕೆಗೆ ಕೇಂದ್ರ ಸರಕಾರವೇ ಕಾರಣ ಎಂದು ಕಾಂಗ್ರೆಸ್ ನವರು ಆಪಾದಿಸಿದರೆ ಗ್ಯಾರಂಟಿ ಯೋಜನೆಗಳ ಹಣದ ಸಮತೋಲನಕ್ಕಾಗಿ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿದೆ ಎಂದು ಬಿಜೆಪಿಯವರು ಉತ್ತರ ನೀಡಿದರು.

ಬಿಜೆಪಿ ಅಭ್ಯರ್ಥಿ ವಿಜಯ ಯಾದರೆ ರಸ್ತೆ ಸೇರಿದಂತೆ ಸುಳ್ಯಕ್ಕೆ ರೈಲು ಸಂಚಾರಕ್ಕೆ ಪ್ರಯತ್ನಿಸಲಾಗುವುದು ಎಂದು ಬಿಜೆಪಿ ಮುಖಂಡರು ಹೇಳಿದರು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನಮ್ಮ ಆದ್ಯತೆ ಎಂದು ಕಾಂಗ್ರೆಸ್ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು. ಸುಳ್ಯ-ಕೊಡಿಯಾಲಬೈಲು-ಜಟ್ಟಿಪಳ್ಳ ರಸ್ತೆ ಸಮಸ್ಯೆ ಬಗ್ಗೆ ಮತದಾರರಾದ ಬಾಲಕೃಷ್ಣ ನಾಯರ್ ಪ್ರಸ್ತಾವಿಸಿ ರಾಜಕೀಯ ಪಕ್ಷಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದೇನೆ‌. ಈ ರಸ್ತೆಗಾಗಿ ಹಲವು ಬಾರಿ ಹೋರಾಟ ನಡೆಸಿದ್ದೇವೆ.ನಮ್ಮ ನೋವಿಗೆ ಯಾವ ಪಕ್ಷದವರು ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನಮ್ಮ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದಲ್ಲಿ ಈ ರಸ್ತೆಯನ್ನು ಖಂಡಿತ ಅಭಿವೃದ್ಧಿಪಡಿಸುತ್ತೇವೆ ಎಂದು ಬಿಜೆಪಿ ಮುಖಂಡ ಹೇಮಂತ್ ಕುಮಾರ್ ಹೇಳಿದರು. ಬಿಜೆಪಿ ಪಕ್ಷದ ಪ್ರಮುಖರಾದ ಹೇಮಂತ ಕುಮಾರ್ ಕಂದಡ್ಕ ,ಶಶಿಕಲಾ ಎ.ನೀರಬಿದಿರೆ,ಬಾಲಕೃಷ್ಣ ರೈ ದುಗ್ಗಲಡ್ಕ, ದಿನೇಶ್ ಡಿ.ಕೆ., ಶೀಲಾವತಿ ಮಾಧವ,ಕುಶ ನೀರಬಿದಿರೆ, ಗಣೇಶ್ ಭಟ್, ಕಾಂಗ್ರೆಸ್ ಪಕ್ಷದ ಪ್ರಮುಖರಾದ ಭಾಸ್ಕರ ಪೂಜಾರಿ ಬಾಜಿನಡ್ಕ, ಇಬ್ರಾಹಿಂ ನೀರಬಿದಿರೆ, ರಾಮಚಂದ್ರನ್ ಕೂಟೇಲು, ಬಶೀರ್ ನೀರಬಿದಿರೆ, ಹಸೈನಾರ್ ಕೊಳಂಜಿಕೋಡಿ, ನಾರಾಯಣ ಟೈಲರ್, ಮತದಾರರಾದ ಬಾಲಕೃಷ್ಣ ನಾಯರ್, ಚಂದ್ರಶೇಖರ ಗೌಡ ಮದಕ, ಯತೀಶ್ ರೈ ದುಗ್ಗಲಡ್ಕ, ಕುಸುಮಾಧರ ಎಸ್.ಎನ್.,ಶ್ರೀಧರ ರೈ ದುಗ್ಗಲಡ್ಕ,ನಿರಂಜನ್ ದುಗ್ಗಲಡ್ಕ ಮೊದಲಾದವರು ಉಪಸ್ಥಿತರಿದ್ದರು.
ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಕಾರ್ಯಕ್ರಮ ನಡೆಸಿಕೊಟ್ಟರು. ವರದಿಗಾರ ರಮೇಶ್ ನೀರಬಿದಿರೆ, ಕ್ಯಾಮರಾಮೆನ್ ಕೌಶಿಕ್ ಬಳ್ಳಕ ಸಹಕರಿಸಿದರು.