ಆಲೆಟ್ಟಿ: ಕುಡೆಕಲ್ಲು ಮಹಮ್ಮಾಯಿ ದೇವಿಯ ಮಹಾ ಪೂಜೆ- ದರ್ಶನ ಬಲಿ ಸೇವೆ

0

ಆಲೆಟ್ಟಿ ಕುಡೆಕಲ್ಲು ಪ.ಜಾತಿ ಕಾಲನಿಯ ಶ್ರೀ ಮಹಮ್ಮಾಯಿ ದೇವಿಯ ದೇವಸ್ಥಾನದಲ್ಲಿ ಶ್ರೀ ದೇವಿಯ ಮಹಾ ಪೂಜೆಯು ಎ.21 ರ ನಡೆಯಿತು.
ಎ.20 ರಂದು ರಾತ್ರಿ ದೇವಿಯ ಗುಡಿಯಿಂದ ಭಂಡಾರ ತೆಗೆದು ಮಾರಿಕಳ ಪ್ರವೇಶ ನಡೆಯಿತು. ಮರುದಿನ ಪ್ರಾತ:ಕಾಲ ದೇವಿಗೆ ರಕ್ತ ತರ್ಪಣೆಯಾಗಿ ಮಧ್ಯಾಹ್ನ ದರ್ಶನ ಪಾತ್ರಿಗಳಿಂದ ದರ್ಶನ ಬಲಿ ಸೇವೆಯಾಗಿ ಪ್ರಸಾದ ವಿತರಣೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು.