ಜೆಡಿಎಸ್ ಪಕ್ಷ ಜಾತ್ಯತೀತ ತತ್ವವನ್ನು ಕಳೆದುಕೊಂಡಿದೆ: ಇಕ್ಬಾಲ್ ಎಲಿಮಲೆ

0

ಗ್ರಾ ಪಂ ಚುನಾವಣೆಗಳಿಂದ ಹಿಡಿದು ಲೋಕಸಭಾ ಚುನಾವಣೆಗಳವರೆಗೂ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ: ಕೆಎಸ್ ಉಮ್ಮರ್

ಜೆಡಿಎಸ್ ಪಕ್ಷವು ತನ್ನ ಜಾತ್ಯತೀತ ತತ್ವವನ್ನು ಕಳೆದುಕೊಂಡಿದೆ. ಯಾವಾಗ ಆ ಪಕ್ಷವು ಒಂದು ಕೋಮುವಾದಿ ಪಕ್ಷದೊಂದಿಗೆ ಕೈಜೋಡಿಸಿತೋ ಅಲ್ಲಿಗೆ ಆ ಪಕ್ಷದ ತತ್ವ ಸಿದ್ಧಾಂತ ಕಳಚಿ ಹೋಗಿದ್ದು ಈ ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿಯೇ ಜೆಡಿಎಸ್ ಪಕ್ಷ ನಿರ್ನಾಮ ಆಗಲಿದೆ ಎಂದು ಇತ್ತೀಚಿಗೆ ಜೆಡಿಎಸ್ ತೊರೆದು ಕಾಂಗ್ರೆಸ್ಸಿಗೆ ಬಂದ ಇಕ್ಬಾಲ್ ಎಲಿಮಲೆ ಇಂದು ಸುಳ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ನಲ್ಲಿ ಬೆರಳೆಣಿಕೆಯ ನಾಯಕರುಗಳು ಮಾತ್ರ ಉಳಿದಿದ್ದು ಕಾರ್ಯಕರ್ತರುಗಳು ಯಾರು ಇಲ್ಲ ಎಂದು ಅವರು ಹೇಳಿದರು. ರಾಜ್ಯದಲ್ಲಿ ಬಿಜೆಪಿ ಸ್ಪರ್ಧಿಸಿರುವ ಮೂರು ಕ್ಷೇತ್ರಗಳಲ್ಲಿಯೂ ಅದು ಸೋಲನ್ನು ಅನುಭವಿಸಲಿದೆ ಎಂದು ಭವಿಷ್ಯ ನುಡಿದರು.
ಈ ಎಲ್ಲಾ ದೃಷ್ಟಿಯಿಂದ ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆ ನೆಲೆಸಬೇಕು ಇದು ಆಗಬೇಕಾದರೆ ಜಾತ್ಯತೀತ ತತ್ವವಿರುವ ಪಕ್ಷಕ್ಕೆ ಮಾತ್ರ ಸಾಧ್ಯ. ಈ ಹಿನ್ನಲೆಯಲ್ಲಿ ನಾವು ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿರದಿಂದ ಮತ್ತೊಬ್ಬ ನಾಯಕ ಇತ್ತೀಚಿಗೆ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡಿರುವ ಕೆ ಎಸ್ ಉಮ್ಮರ್ ಮಾತನಾಡಿ ಬಿಜೆಪಿ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿಯಾಗಿದೆ. ನಗರ ಪಂಚಾಯಿತಿನಿಂದ ಹಿಡಿದು ರಾಜ್ಯ ರಾಷ್ಟ್ರ ಕನಕ ಎಲ್ಲಾ ಚುನಾವಣೆಗಳಲ್ಲಿಯೂ ಬಿಜೆಪಿಯನ್ನು ಸೋಲಿಸಬೇಕಾಗಿದೆ. ಅದಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ಹೇಳಿದ್ದಾರೆ. ಸುಳ್ಯದಲ್ಲಿ ಒಂದುವರೆ ಸೆನ್ಸ್ ನಿವೇಶನಕ್ಕೆ ಅರ್ಜಿಗಳನ್ನು ಹಾಕಿ ಸುಮಾರು 600 ಫಲಾನುಭವಿಗಳು ಹಲವಾರು ವರ್ಷಗಳಿಂದ ಕಾಯುತ್ತಿದ್ದಾರೆ. ಇದು ಯಶಸ್ವಿಗೊಳ್ಳಬೇಕಾದರೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಅದೇ ರೀತಿ ನಗರ ಆಡಳಿತದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಮಾತ್ರ ಸಾಧ್ಯ.
ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ನಡೆದಿರುವಂತಹ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ಇಡೀ ಮಾನವ ಸಮುದಾಯ ತಲೆತಗ್ಗಿಸುವಂತಹದ್ದಾಗಿದೆ. ಇದರಲ್ಲಿ ಬಿಜೆಪಿಯು ರಾಜಕೀಯವನ್ನು ಮಾಡುತ್ತಾ ಅದರ ಲಾಭವನ್ನು ಪಡೆದುಕೊಳ್ಳಲು ಹೊರಟಿದ್ದಾರೆ. ಇದು ಖಂಡನೀಯ ಎಂದು ಹೇಳಿದರು. ನಾವು ನಿಜವಾದ ಭಾರತೀಯರಾಗಬೇಕಾದರೆ ದೇಶದಲ್ಲಿ ಯಾವುದೇ ಜಾತಿ ಮತ್ತು ಧರ್ಮದ ಹೆಣ್ಣು ಮಗಳಿಗೆ ಅನ್ಯಾಯವಾದರೆ ಅದನ್ನು ಕೇಳುವ ಮನಸ್ಸು ಮತ್ತು ಶಕ್ತಿ ನಮ್ಮಲ್ಲಿ ಇರಬೇಕಾಗಿದೆ. ಅದು ಬಿಟ್ಟು ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಘಟನೆಗಳು ಮಾತ್ರ ಎದುರಾದಾಗ ಇನ್ನೊಂದು ಧರ್ಮದ ಮೇಲೆ ಸೇಡು ತೀರಿಸಿಕೊಳ್ಳುವ ಕುತಂತ್ರ ರಾಜಕೀಯ ಮನಸ್ಸು ನಮ್ಮದಾಗಬಾರದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಟಿಎಂಶಹೀದ್, ವಕೀಲರಾದ ಫವಾಜ್ ಕನಕಮಜಲು, ಸಿದ್ಧಿಕ್ ಕೊಕ್ಕೋ ಉಪಸ್ಥಿತರಿದ್ದರು.