ಆಲೆಟ್ಟಿ: ತಲೆಪಳದಲ್ಲಿ ಮನೆ ಮೇಲೆ ಮರ ಬಿದ್ದು ಹಾನಿ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ತಲೆಪಳ ಎಂಬಲ್ಲಿ ಆನಂದ ನಾಯ್ಕರವರ ಮನೆಯ ಮೇಲೆ ಇಂದು ಸಂಜೆ ಬೀಸಿದ ವ್ಯಾಪಕ ಬಿರುಗಾಳಿಗೆ ಮರವೊಂದು ಮನೆಯ ಮೇಲೆ ಬಿದ್ದು ಅಪಾರ ಹಾನಿಯುಂಟಾಗಿದೆ.

ಅದೃಷ್ಟ ವಶಾತ್ ಮನೆಯಲ್ಲಿ ಮರ ಬೀಳುವ ಸಂದರ್ಭದಲ್ಲಿ ಯಾರು ಇಲ್ಲದೆ ಇದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತೆರಳಿದ ಆಲೆಟ್ಟಿ ಪಂಚಾಯತ್ ಸದಸ್ಯ
ಸತ್ಯಕುಮಾರ್ ಆಡಿಂಜ ಹಾಗೂ ಸ್ಥಳೀಯರು ಸೇರಿ ಮರ ತೆರವುಗೊಳಿಸುವಲ್ಲಿ ಪ್ರಯತ್ನಿಸಿದರು.
ಈ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.