ನೆಲ್ಲೂರು ಕೆಮ್ರಾಜೆ: ಕಾಂಗ್ರೆಸ್ ಅಭ್ಯರ್ಥಿ ಪರ ಮನೆಮನೆ ಪ್ರಚಾರ

0

ಮಂಗಳೂರು ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಅವರ ಪರವಾಗಿ ನೆಲ್ಲೂರು ಕೆಮ್ರಾಜೆ ಗ್ರಾಮದ ಜೀರ್ಮುಖಿ ಭಾಗದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪಿ.ಸಿ. ಜಯರಾಮ್, ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಇಕ್ಬಾಲ್ ಎಲಿಮಲೆ, ಸುಳ್ಯ ನಗರ ಪಂಚಾಯತ್ ಸದಸ್ಯರಾದ ಕೆ.ಎಸ್. ಉಮರ್. ದ. ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷರು ಎ .ಕೆ. ಇಬ್ರಾಹಿಂ ಕಲ್ಲುಗುಂಡಿ. ತಾಲೂಕು ಅಲ್ಪಸಂಖ್ಯಾತರ ವಿಭಾಗದ ಖಜಾಂಚಿ ತಾಜ್ ಮಹಮ್ಮದ್ ಸಂಪಾಜೆ, ಫೈಝಲ್ ಜಿರ್ಮುಕ್ಕಿ, ಅಬ್ದುಲ್ಲಾ ಜೀರ್ಮುಖಿ ಮೊದಲಾದವರು ಉಪಸ್ಥಿತರಿದ್ದರು.