ಅಮರಮುಡ್ನೂರು : ಮಾತೃಶ್ರೀ ಡಿಜಿಟಲ್ ಕೇಂದ್ರ ಶುಭಾರಂಭ

0


ಅಮರಮುಡ್ನೂರು ಗ್ರಾಮದ ಅಮರ ಸಹಕಾರ ಸೌಧ ಸಂಕೀರ್ಣದಲ್ಲಿ ಪ್ರಶಾಂತಿ ಮಾಲಕತ್ವದ ಮಾತೃಶ್ರೀ ಡಿಜಿಟಲ್ ಕೇಂದ್ರ ಏಪ್ರಿಲ್.21ರಂದು ಗಣಪತಿ ಹವನದೊಂದಿಗೆ ಶುಭಾರಂಭಗೊಂಡಿತು. ಇಲ್ಲಿ ಆಧಾರ್ ತಿದ್ದುಪಡಿ, ರೇಷನ್ ಕಾರ್ಡ್, ಪಾನ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್, ಪಿ. ಎಂ. ಕಿಸಾನ್, ಹಿರಿಯ ನಾಗರಿಕ ಕಾರ್ಡ್, ಕಟ್ಟಡ ಕಾರ್ಮಿಕ ಕಾರ್ಡ್, ಈ. ಶ್ರಮ್ ಕಾರ್ಡ್, ಪಾಸ್ಪೋರ್ಟ್, ಓಟರ್ ಐಡಿ, ವಿಧವಾ ವೇತನ, ಆರ್. ಟಿ. ಸಿ, ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರದ ಅನೇಕ ಸೇವೆಗಳು ಲಭ್ಯವಿರುತ್ತದೆ.