ಪಂಜ:ಅಳ್ಪೆ ಚಿಂಗಾಣಿಗುಡ್ಡೆ ವಾರ್ಷಿಕ ನೇಮೋತ್ಸವ ಸಂಪನ್ನ

0

ಪಂಜದ ಅಳ್ಪೆ ಚಿಂಗಾಣಿಗುಡ್ಡೆ ಶ್ರೀ ಉಳ್ಳಾಕುಲು ಉಳ್ಳಾಲ್ತಿ,ಮಹಿಷಂತಾಯ ಹಾಗೂ ಪರಿವಾರ ದೈವಗಳ ದೈವಸ್ಥಾನ ಇದರ ವಾರ್ಷಿಕ ನೇಮೋತ್ಸವವು ಎ.22 ರಂದು ಆರಂಭಗೊಂಡು ಎ23 ರಂದು ರಾತ್ರಿ ಸಂಪನ್ನ ಗೊಂಡಿತು.

ಎ.23. ರಂದು ಬೆಳಗ್ಗೆ ಶ್ರೀ ಉಳ್ಳಾಲ್ತಿ ಅಮ್ಮನವರ ನೇಮ, ಶ್ರೀ ಉಳ್ಳಾಕುಲು ದೈವದ ನೇಮ,ಸಂಜೆ ಶ್ರೀ ಕುಪ್ಪೆ ಪಂಜುರ್ಲಿ ದೈವ ಮತ್ತು ಶ್ರೀ ಗುಳಿಗ ದೈವದ ನೇಮ, ರಾತ್ರಿ ಪರಿವಾರ ದೈವಗಳ ಮತ್ತು ಶ್ರೀ ಧರ್ಮ ದೈವ ರುದ್ರ ಚಾಮುಂಡಿ ದೈವದ ನೇಮ ಜರುಗಿತು.