ಐ.ಐ.ಟಿ ಗೆ ಪ್ರವೇಶವಕಾಶ ಪಡೆದ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಜಿನ ಸಾತ್ವಿಕ್ ಎಚ್. ಎಸ್

0

ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಜೆಇಇ ಮೈನ್ಸ್ ಪರೀಕ್ಷೆ ಯಲ್ಲಿ 98.4ಪರ್ಸಟೈಲ್ ಅಂಕ

ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿ.ಯು. ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಾತ್ವಿಕ್ ಎಚ್. ಎಸ್, ಐ.ಐ.ಟಿ ಯವರು ನಡೆಸುವ ಜೆ.ಇ.ಇ‌ ಮೈನ್ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ 98.4 ಪರ್ಸಟೈಲ್ ಅಂಕ ಪಡೆಯುವುದರೊಂದಿಗೆ ಜೆಇಇ ಅಡ್ವಾನ್ಡ್ ಪರೀಕ್ಷೆ ಬರೆಯುವ ಅರ್ಹತೆ ಪಡೆದುಕೊಂಡಿದ್ದಾರೆ.

ವಿಜ್ಞಾನ ಮತ್ತು ಗಣಿತವನ್ನು ಅಭ್ಯಸಿಸಿ ಗಣಿತಜ್ಞ ನಾಗಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳ ಬೇಕೆಂಬ ಗುರಿ ಹೊಂದಿರುವ ಇವರು ಎಸ್.ಎಸ್.ಎಲ್.ಸಿ.ಯಲ್ಲೂ ರಾಜ್ಯಕ್ಕೆ ಟಾಪರ್ ಆಗಿದ್ದರು. ದ್ವಿತೀಯ ಪಿ.ಯು ವಿಜ್ಞಾನ ವಿಭಾಗದಲ್ಲಿ 98.4 % ಪಡೆದು ಕಡಬ ಮತ್ತು ಸುಳ್ಯ ತಾಲೂಕಿಗೆ ಪ್ರಥಮ ಸ್ಥಾನಿಯಾಗಿದ್ದರು. ಇವರು ಅಮರ ಪಡ್ನೂರು ಗ್ರಾಮದ ಡಾ.ಶಶಿಧರ್ ಹಾಸನಡ್ಕ ಮತ್ತು ಡಾ. ಅನುಪಮಾ ದಂಪತಿಗಳ ಪುತ್ರ.