ದೊಡ್ಡತೋಟ ಮತದಾನ ಕೇಂದ್ರದಲ್ಲಿ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ

0

ಅಮರಮುಡ್ನೂರು ಗ್ರಾಮದ ದೊಡ್ಡತೋಟ ದ.ಕ.ಜಿ.ಪ.ಹಿ.ಪ್ರಾ. ಶಾಲೆಯ ಮತದಾನ ಕೇಂದ್ರದಲ್ಲಿ ಬೆಳಿಗ್ಗೆ 7 ರಿಂದ ಮತದಾನ ಆರಂಭವಾಗಿದೆ.


ಇಲ್ಲಿ ಒಟ್ಟು 1119 ಮತದಾರರಿದ್ದು, 548 ಪುರುಷರು, 571 ಮಹಿಳೆಯರು ಇಂದು ಮತ ಚಲಾಯಿಸಲಿದ್ದಾರೆ.‌

ಇಲ್ಲಿಯೂ ಬೆಳಿಗ್ಗೆಯಿಂದಲೇ ಸರದಿಯ ಸಾಲು ಕಂಡು ಬಂದಿತ್ತು. ಬೆಳಿಗ್ಗೆ 9.30ರ ವೇಳೆಗೆ ಸರತಿಯ ಸಾಲು ಇಲ್ಲದೇ ಸಾವಕಾಶವಾಗಿ ಮತದಾನ ಮಾಡುವಂತಾಗಿತ್ತು.