ನೆಟ್ಟಾರು ಶಾಲೆ ಈ ಬಾರಿ ಸೂಕ್ಷ್ಮ ಮತಗಟ್ಟೆ

0

ಬೆಳ್ಳಾರೆ ಗ್ರಾಮದ ನೆಟ್ಟಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಸೂಕ್ಷ್ಮ ಮತಗಟ್ಟೆಯೆಂದು ಪರಿಗಣಿಸಲಾಗಿದೆ.
ಬೆಳ್ಳಾರೆ ಸಮೀಪ ಪ್ರವೀಣ್ ನೆಟ್ಟಾರು ರವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ ಹಿನ್ನೆಲೆಯಲ್ಲಿ ಇಲ್ಲಿ ಸೂಕ್ಷ್ಮ ಮತಗಟ್ಟೆ ಮಾಡಲಾಗಿದ್ದು ಮೂರು ಮಂದಿ ಮಿಲಿಟರಿ ಪಡೆಯವರನ್ನು ಇಲ್ಲಿಗೆ ಕರ್ತವ್ಯಕ್ಕೆ ನೇಮಿಸಲಾಗಿದೆ.