ಹಿಂದೂ ಯುವತಿಯ ಫೋಟೋ ಕ್ಲಿಕ್ಕಿಸಿ ಸಿಕ್ಕಿ ಬಿದ್ದ ಅನ್ಯಕೋಮಿನ ಯುವಕನ ಮೇಲೆ ಪೋಲಿಸ್ ಕೇಸು ದಾಖಲು

0

ಯುವತಿಯರಿಗೆ ಎಚ್ಚರಿಕೆಯ ಕರೆಗಂಟೆ ನೀಡಿದ ಹಿಂದೂ ಸಂಘಟನೆಯ ಮುಖಂಡರು

ಸುಳ್ಯದ ಗಾಂಧಿನಗರದ ಏರ್ ಟೆಲ್ ಶೋ ರೋಂ ಗೆ ಕರೆನ್ಸಿ ರಿಚಾರ್ಚ್ ಗೆಂದು ಬಂದ ಹಿಂದೂ ಯುವತಿಯೊಬ್ಬಳ ಫೋಟೋ ಕ್ಲಿಕ್ಕಿಸಿ ಸಿಕ್ಕಿ ಬಿದ್ದ ಮುಸ್ಲಿಂ ಯುವಕನ ಮೇಲೆ ಯುವತಿಯ ಮನೆಯವರು ನೀಡಿದ ದೂರಿನ ಮೇಲೆ ಕೇಸು ದಾಖಲಿಸಿರುವ ಘಟನೆ ವರದಿಯಾಗಿದೆ.

ಗಾಂಧಿನಗರದಲ್ಲಿರುವ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಿಂದೂ ಯುವತಿಯೊಬ್ಬಳು ರಿಚಾರ್ಜ್ ಗೆ ಬಂದ ಸಂದರ್ಭದಲ್ಲಿ ಕುಳಿತುಕೊಳ್ಳುವಂತೆ ಹೇಳಿದ ಯುವಕ ಯುವತಿಗೆ ಅರಿವಿಗೆ ಬಾರದಂತೆ ಫೋಟೋ ಕ್ಲಿಕ್ಕಿಸಿರುತ್ತಾನೆ. ಇದನ್ನು ಗಮನಿಸಿದ ಯುವತಿ ಆಕ್ಷೇಪಿಸಿರುವುದಲ್ಲದೆ ಆತನ ಮೊಬೈಲನ್ನು ಕಸಿದುಕೊಂಡು ಆಕೆಯ ಫೋಟೋ ಕ್ಲಿಕ್ಕಿಸಿದ್ದನ್ನು ದೃಢ ಪಡಿಸಿಕೊಂಡಿದ್ದಾಳೆ. ಘಟನೆಯ ಕುರಿತು ತನ್ನ ಅಣ್ಣನಿಗೆ ವಿಷಯ ತಿಳಿಸಿರುತ್ತಾಳೆ. ಬಳಿಕ ಅಲ್ಲಿಂದ ನೇರವಾಗಿ ಮನೆಯವರೊಂದಿಗೆ ಸುಳ್ಯ ಪೋಲಿಸ್ ಠಾಣೆಗೆ ಬಂದು ಘಟನೆಯ ಕುರಿತು ಲಿಖಿತ ದೂರು ನೀಡಿರುತ್ತಾಳೆ.


ವಿಷಯ ತಿಳಿಯುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್, ನಗರ ಭಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಮುಖಂಡರು ಮತ್ತು ಕಾರ್ಯಕರ್ತರು ಪೋಲಿಸ್ ಠಾಣೆಗೆ ಆಗಮಿಸಿದ್ದರು.
ತಪ್ಪಿತಸ್ಥ ಯುವಕನನ್ನು ಪೋಲಿಸರು ಕರೆತಂದು ಕಸ್ಟಡಿಯಲ್ಲಿರಿಸಿ
ವಿಚಾರಿಸಿದಾಗ ಆತ ತಪ್ಪು‌ ಒಪ್ಪಿಕೊಂಡಿರುವುದಾಗಿ ತಿಳಿದು ಬಂದಿದೆ.

ಸುಳ್ಯದಲ್ಲಿ ಇಂತಹ ಪ್ರಕರಣಗಳು
ದಿನೇ ದಿನೇ ಹೆಚ್ಚುತ್ತಿದ್ದು ಯುವತಿಯರು ಮೊಬೈಲ್ ಅಂಗಡಿಗಳಿಗೆ ಹೋಗಿ ವ್ಯವಹರಿಸುವ ಸಂದರ್ಭದಲ್ಲಿ ಅಲ್ಲಿ ಕೆಲಸ ನಿರ್ವಹಿಸುವ ಅಥವಾ ಅಕ್ಕ ಪಕ್ಕದಲ್ಲಿ ನಿಂತಿರುವ ಯುವಕರ ಚಲನ ವಲನಗಳ ಮೇಲೆ ಗಮನ ಇರಿಸಿಕೊಳ್ಳಬೇಕು. ಇಲ್ಲವಾದಲ್ಲಿ ಈ ರೀತಿಯಾಗಿ ನಿಮಗೆ ತಿಳಿಯದಂತೆ ಫೋಟೋ ತೆಗೆದು ಸಾಮಾಜಿಕ ‌ಜಾಲತಾಣದಲ್ಲಿ ಹರಿಯಬಿಟ್ಟು ಯುವತಿಯರ ಮಾನ ಹಾನಿ ಮಾಡುವ ಸಾಧ್ಯತೆಯಿದೆ. ತಪ್ಪಿತಸ್ಥ ಆರೋಪಿಗಳ ಮೇಲೆ ಇಲಾಖೆಯು ಕಾನೂನು ಕ್ರಮ ಕೈಗೊಳ್ಳಬೇಕು. ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದಂತೆ ಎಚ್ಚರಿಕೆಯ ಕರೆ ಗಂಟೆ ಯಾಗಬೇಕು ಎಂದು ಹಿಂದೂ ಸಂಘಟನೆಯ ಮುಖಂಡರು ಸುದ್ದಿಯ ಮೂಲಕ ತಿಳಿಸಿದರು.