ಚೆಂಬು: ಊರುಬೈಲು: ಶಿರಾಡಿ ದೈವದ ನೇಮೋತ್ಸವ

0

ಊರುಬೈಲು ಕುಟುಂಬಸ್ಥರು ಹಾಗೂ ಭಕ್ತಾದಿಗಳು ಭಾಗಿ

ಚೆಂಬು ಗ್ರಾಮದ ಊರುಬೈಲಿನ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಶಿರಾಡಿ ದೈವದ ನೇಮೋತ್ಸವವು ಮೇ.6 ಮತ್ತು 7ರಂದು ನಡೆಯಿತು.

ಮೇ.6ರಂದು ರಾತ್ರಿ ಊರುಬೈಲಿನ ಐನ್ ಮನೆಯಿಂದ ಭಂಡಾರ ಆಗಮಿಸಿ, ದೈವಗಳ ಕೂಡುವಿಕೆ ನಡೆಯಿತು.
ಮೇ.7ರಂದು ಬೆಳಿಗ್ಗೆ ಶಿರಾಡಿ ದೈವದ ನೇಮೋತ್ಸವ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಬಳಿಕ ಉಪದೈವಗಳ ಕೋಲ ನಡೆಯಿತು.

ಈ ಸಂದರ್ಭದಲ್ಲಿ ದೈವಸ್ಥಾನದ ಅಧ್ಯಕ್ಷ ಯು.ಕೆ. ಜಯರಾಮ, ಊರುಬೈಲು ಕುಟುಂಬದ ಯಜಮಾನ ಜನಾರ್ದನ ಅಂಬಟೆಕಜೆ, ಶ್ರೀಮತಿ ಲೀಲಾವತಿ ಜಯಪ್ರಕಾಶ್ ಊರುಬೈಲು, ಉಜ್ವಲ್ ಊರುಬೈಲು, ಶ್ರೀಮತಿ ಸ್ಮಿತಾ ಉಜ್ವಲ್ ಊರುಬೈಲು, ಯು.ಪಿ. ರಾಮಕೃಷ್ಣ ಊರುಬೈಲು, ಯು.ಕೆ. ವಸಂತ ಊರುಬೈಲು, ಶ್ರೀಮತಿ ಶೋಭಾ ಶಿವಾನಂದ ಊರುಬೈಲು, ಸೃಜನ್ ಊರುಬೈಲು, ಚೆಂಬು ಗ್ರಾ.ಪಂ. ಸದಸ್ಯ ವಸಂತ ಊರುಬೈಲು, ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ ಊರುಬೈಲು, ರಮೇಶ್ ಹುಲ್ಲುಬೆಂಕಿ, ಯು.ಕೆ. ಬಾಲಚಂದ್ರ ಗೌಡ ಊರುಬೈಲು, ಚೆಂಬು ಗ್ರಾ.ಪಂ. ಮಾಜಿ ಅಧ್ಯಕ್ಷ ದಿನೇಶ್ ಊರುಬೈಲು, ಪಯಸ್ವಿನಿ ಸಹಕಾರಿ ಸಂಘದ ಉಪಾಧ್ಯಕ್ಷ ವಾಸುದೇವ ನಿಡಿಂಜಿ, ಸಹದೇವ ಊರುಬೈಲು, ವಿಶ್ವಮಿತ್ರ ಊರುಬೈಲು, ಹರೀಶ್ ಊರುಬೈಲು, ಬಲದೇವ್ ಗ್ರಾನೈಟ್ ಮಾಲಕ ಸಂತೋಷ್ ಊರುಬೈಲು ಸೇರಿದಂತೆ ಊರುಬೈಲು ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.