ಪ್ರಯಾಣಿಕರಿಗೆ ಉಚಿತ ಪ್ರಯಾಣ ಸೇವೆ ನೀಡುವುದರ ಮೂಲಕ 75 ನೇ ಹುಟ್ಟುಹಬ್ಬ ಆಚರಿಸಿಕೊಂಡ ಆಟೋ ಚಾಲಕ

0

ಜಾಲ್ಸೂರು ಗ್ರಾಮದ ಆರ್ತಾಜೆ ನಿವಾಸಿ, ಕಳೆದ 50 ವರ್ಷಗಳಿಂದ ರಿಕ್ಷಾ ಚಾಲಕರಾಗಿ ದುಡಿಯುತ್ತಿರುವ ಮೋಹನ್ ನಾಯಕ್ ರವರಿಗೆ ಇಂದು 75 ವರ್ಷ ತುಂಬಿದ್ದು ಆ ಪ್ರಯುಕ್ತ ಅವರು ಇಂದು ಉಚಿತ ಬಾಡಿಗೆ ಸೇವೆ ನೀಡುವುದರ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು.ಇವರು ತನಗೆ 60 ವರ್ಷ ತುಂಬಿದಾಗಲೂ ಪ್ರಯಾಣಿಕರಿಗೆ ಉಚಿತ ಪ್ರಯಾಣದ ಸೇವೆ ಒದಗಿಸಿದ್ದರು. ಇಂದು 75 ವರ್ಷ ತುಂಬಿದಾಗಲೂ ಮನೆಯಲ್ಲಿ ವಿಶ್ರಾಂತಿ ಪಡೆಯದೆ ಬೆಳಿಗ್ಗೆಯಿಂದಲೇ ತಾನು ಯಾವಾಗಲೂ ಬಾಡಿಗೆಗೆ ನಿಲ್ಲುವ ಶ್ರೀರಾಂಪೇಟೆಯಿಂದ ಜೂನಿಯರ್ ಕಾಲೇಜ್ ಕಡೆಗೆ ತಿರುಗುವಲ್ಲಿನ ರಿಕ್ಷಾ ಸ್ಟ್ಯಾಂಡಿನಲ್ಲಿ ರಿಕ್ಷಾ ನಿಲ್ಲಿಸಿ ತನ್ನ ರಿಕ್ಷಾ ಹತ್ತಿದ ಪ್ರಯಾಣಿಕರೆಲ್ಲರಿಗೆ ಉಚಿತ ಪ್ರಯಾಣದ ಸೇವೆ ನೀಡಿದರು.