ಸೈಂಟ್ ಬ್ರಿಜಿಡ್ಸ್ ಚರ್ಚ್ ನಲ್ಲಿ ಸಿಸ್ಟರ್ ಬಿನೋಮರಿಗೆ ಬೀಳ್ಕೊಡುಗೆ

0

ಆಂಧ್ರಪ್ರದೇಶದ ಗುಂಟೂರಿಗೆ ವರ್ಗಾವಣೆಗೊಂಡಿರುವ ಸುಳ್ಯ ಸಂತ ಜೋಸೆಫ್ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಬಿನೋಮರಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜೂನ್ 2 ರಂದು ಸುಳ್ಯದ ಸೈಂಟ್ ಬ್ರಿಜಿಡ್
ಚರ್ಚ್ ನಲ್ಲಿ ನಡೆಯಿತು.

ಭಾನುವಾರದ ಬಲಿಪೂಜೆಯ ನಂತರ ಚರ್ಚ್ ಧರ್ಮಗುರುಗಳಾದ ರೆ. ಫಾ. ವಿಕ್ಟರ್ ಡಿ. ಸೋಜಾ, ಪಾಲನಾ ಸಮಿತಿ ಉಪಾಧ್ಯಕ್ಷ ನವೀನ್ ಮಾಚಾದೊ, ಕಾರ್ಯದರ್ಶಿ ಜೂಲಿಯಾನ ಕ್ರಾಸ್ತಾ ಶಾಲು ಹೊದಿಸಿ ಫಲಪುಷ್ಪ ನೀಡಿ ಬೀಳ್ಕೊಡುಗೆ ಕಾರ್ಯಕ್ರಮ ನಡೆಸಿಕೊಟ್ಟರು.