ದೆಹಲಿಯಲ್ಲಿ ನಡೆದ ಪ್ರೋ ಪಂಜ ಲೀಗ್ X ಚಾಂಪಿಯನ್ ಶಿಪ್ ನಲ್ಲಿ ದರ್ಶನ್ ಗೌಡ ದೇರುಮಜಲು ಭಾಗಿ

0

ಜೂ.7ಮತ್ತು 8ರಂದು ದೆಹಲಿಯಲ್ಲಿ ನಡೆದ ಪ್ರೊ ಪಂಜ ಲೀಗ್ X ( ಆರ್ಮ್ ರಸ್ಲಿಂಗ್) ಆಲ್ ಇಂಡಿಯಾ ಚಾಂಪಿಯನ್‌ ಶಿಪ್ ನಲ್ಲಿ ಮಡಪ್ಪಾಡಿ ಗ್ರಾಮದ ದೇರುಮಜಲು ದರ್ಶನ್ ಗೌಡರವರು ಭಾಗವಹಿಸಿ 9ನೇ ಸ್ಥಾನಿಯಾಗಿದ್ದಾರೆ.

ಉಜಿರೆಯ ಎಸ್.ಡಿ.ಎಂ.ನಲ್ಲಿ ಬಿ.ಬಿ.ಎ. ವಿದ್ಯಾರ್ಥಿಯಾಗಿರುವ ದರ್ಶನ್ ಗೌಡರವರು ಆರ್ಮ್ ರಸ್ಲಿಂಗ್ ನಲ್ಲಿ ಆಸಕ್ತಿ ಹೊಂದಿದ್ದು, ಅಭ್ಯಾಸ ನಿರತರಾಗಿದ್ದಾರೆ.

ಇವರು ಮಡಪ್ಪಾಡಿ ಗ್ರಾಮದ ದೇರುಮಜಲು ಶ್ರೀಮತಿ ಜಯಲತಾ ಗೌಡ ರವರ ಪುತ್ರ.