ನಿವೃತ್ತ ಪೋಲಿಸ್ ಹೆಡ್ ಕಾನ್ಸಟೇಬಲ್ ಶಿವರಾಯ ಗೌಡ ಕಲುಂಗುಡಿ ನಿಧನ

0

ನಿವೃತ್ತ ಪೋಲಿಸ್ ಹೆಡ್ ಕಾನ್ಸಟೇಬಲ್
ಬಳ್ಪ ಗ್ರಾಮದ ಕಲುಗುಡಿ ನಿವಾಸಿ ಶಿವರಾಯ ಗೌಡರು ಜೂ. 12ರಂದು ಅಸೌಖ್ಯದಿಂದ ನಿಧನರಾದರು. ಇವರಿಗೆ 74 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ನಾಗವೇಣಿ, ಪುತ್ರ ಉದ್ಯಮಿ ಹರೀಶ್ ಕಲುಂಗುಡಿ, ಪುತ್ರಿಯರಾದ ಶ್ರೀಮತಿ ಅನಿತಾ ರಾಮಚಂದ್ರ ಬೊಳ್ಳೂರು, ಮಮತಾ ಪ್ರಶಾಂತ್ ಧರ್ಮಸ್ಥಳ, ಸಹೋದರರಾದ ರುಕ್ಮಯ್ಯ ಗೌಡ ಕಲುಂಗುಡಿ, ಸೂರಪ್ಪ ಗೌಡ ಕಲುಂಗುಡಿ, ಓರ್ವ ಸಹೋದರಿ ಶ್ರೀಮತಿ ದೇವಕಿ ಆಲಂಗಾರು, ಸೊಸೆ ಶ್ರೀಮತಿ ಭವ್ಯ ಹರೀಶ್ ಸೇರಿದಂತೆ ಮೊಮ್ಮಕ್ಕಳು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.