ಅಮರಪಡ್ನೂರು: ಆಕಸ್ಮಿಕವಾಗಿ ಮೃತಪಟ್ಟ ಕೃಷಿಕನ ಕುಟುಂಬಕ್ಕೆ ಪರಿಹಾರದ ಮಂಜೂರಾತಿ ಪತ್ರ ಶಾಸಕರಿಂದ ಹಸ್ತಾಂತರ

0

ಅಮರಪಡ್ನೂರಿನ ಚೊಕ್ಕಾಡಿ ನಿವಾಸಿ ರಾಧಾಕೃಷ್ಣ ರವರು ಕೃಷಿ ಕಾಯಕದಲ್ಲಿ ತೊಗಿಸಿಕೊಂಡಿರುವ ವೇಳೆಯಲ್ಲಿ ದನವನ್ನು ತೋಟದಲ್ಲಿ ಮೇಯಲು ಕಟ್ಟುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು ಅವರ ಕುಟುಂಬಕ್ಕೆ ಕೃಷಿ ಇಲಾಖೆಯಿಂದ
ರೂ.2 ಲಕ್ಷ ಪರಿಹಾರ ಮಂಜೂರಾಗಿದ್ದು ಮಂಜೂರಾತಿ ಪತ್ರವನ್ನು ಶಾಸಕಿ‌ ಕು.ಭಾಗೀರಥಿ ಮುರುಳ್ಯ ರವರು
ರಾಧಾಕೃಷ್ಣ ರವರ ಪತ್ನಿ ಶ್ರೀಮತಿ ರಮಾ ರವರಿಗೆ ಹಸ್ತಾಂತರಿಸಿದರು.

ಶ್ರೀಮತಿ ರಮಾರವರಿಗೆ ಮಾಸಿಕ ವಿಧವಾ ವೇತನ ರೂ.2 ಸಾವಿರ ಹಾಗೂ ಮಕ್ಕಳ ಶಿಕ್ಷಣಕ್ಕೆ
ಹಾಸ್ಟೆಲ್ ವ್ಯವಸ್ಥೆ ಮಂಜೂರಾಗಿರುವುದಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಎಸ್.ಎನ್.ಮನ್ಮಥ, ಚೊಕ್ಕಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಕರ್ಮಾಜೆ, ಅಮರಮುಡ್ನೂರು ಪಂಚಾಯತ್ ಸದಸ್ಯ ರಾಧಾಕೃಷ್ಣ ಕೊರತ್ಯಡ್ಕ,ಚಂದ್ರಶೇಖರ ಪಡ್ಪು, ಜಯರಾಮ ಚೆನ್ನಮಲೆ, ಮೋಹನ ನಡುಗಲ್ಲು, ಪದ್ಮನಾಭ ಬೀಡು, ಶಾಂತಾರಮ ಕಣಿಲೆಗುಂಡಿ, ಹರೀಶ್ ರೈ ಉಬರಡ್ಕ, ಪ್ರಸಾದ್ ಕಾಟೂರು ಮತ್ತಿತರರು ಉಪಸ್ಥಿತರಿದ್ದರು.