ಆರ್.ಕೆ.ನಾಯರ್ ರೂಪಿಸಿದ ಸ್ಮೃತಿವನ್‌ಗೆ ಯುನೆಸ್ಕೋ ಅವಾರ್ಡ್

0


ಹಲವು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಭೂಕಂಪದ ಸ್ಮಾರಕವಾಗಿ ಗುಜರಾತ್‌ನ ಭುಜ್ ಎಂಬಲ್ಲಿ ಸರಕಾರದ ವತಿಯಿಂದ ನಿರ್ಮಿಸಲಾದ ಸ್ಮೃತಿವನ್‌ಗೆ ಪ್ರತಿಷ್ಠಿತ ಪ್ರಿಕ್ಸ್ ವರ್ಸೈಲ್ಸ್ ಅವಾರ್ಡ್‌ನ್ನು ಯುನೆಸ್ಕೋ ಘೋಷಿಸಿದೆ. ವಾಸ್ತುಶಿಲ್ಪ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಪ್ರತಿವರ್ಷ ಯುನೆಸ್ಕೋ ಪ್ರಶಸ್ತಿ ಘೋಷಿಸುತ್ತಿದ್ದು, ಈ ವರ್ಷ ವಿಶ್ವದ ಏಳು ಅತ್ಯಂತ ಸುಂದರವಾದ ವಸ್ತುಸಂಗ್ರಹಾಲಯಗಳ ಪಟ್ಟಿಯಲ್ಲಿ ಸ್ಮೃತಿವನ್ ಸ್ಥಾನ ಪಡೆದಂತಾಗಿದೆ.


ಸ್ಥಳೀಯ ಸಂಸ್ಕೃತಿ ಮತ್ತು ಪ್ರಕೃತಿ ಸಂರಕ್ಷಣೆಯ ಅಭಿವ್ಯಕ್ತಿಗಾಗಿ ಭಾರತದ ವಸ್ತುಸಂಗ್ರಹಾಲಯವೊಂದು ಜಾಗತಿಕ ಮನ್ನಣೆ ಪಡೆದಿರುವುದು ಇದೇ ಮೊದಲು ಎಂದು ಗುಜರಾತ್‌ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಶ್ಲಾಘಿಸಿದ್ದಾರೆ.


ಸ್ಮೃತಿವನ್ ಅನ್ನು ೨೦೨೨ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿದ್ದರು. ಇದರ ವಿನ್ಯಾಸವನ್ನು ಗ್ರೀನ್ ಹೀರೋ ಆಫ್ ಇಂಡಿಯಾ ಎಂದು ನಾಮಾಂಕಿತರಾಗಿರುವ ಡಾ.ಆರ್.ಕೆ.ನಾಯರ್‌ರವರು ತಮ್ಮ ಫಾರೆಸ್ಟ್ ಕ್ರಿಯೇಟರ್‍ಸ್ ಸಂಸ್ಥೆಯ ಮೂಲಕ ರೂಪಿಸಿ ಅನುಷ್ಠಾನಗೊಳಿಸಿದ್ದರು.